ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಇಂದು ತಮ್ಮ 49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೌರವ್ ಗಂಗೂಲಿ 1992 ಜನವರಿ 11ರಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.
ಸೌರವ್ ಗಂಗೂಲಿ ತಮ್ಮ ಸ್ಪೋಟಕ ಬ್ಯಾಟ್ಸಿಂಗ್ ನಿಂದಲೇ ಹೆಸರುವಾಸಿಯಾಗಿದ್ದರು ಎಡಗೈ ಬ್ಯಾಟ್ಸ್‌ಮನ್ ಆದ ಇವರು ಎಂತಹ ಘಟಾನುಘಟಿ ಬೌಲರ್ ಗಳ ಮೇಲೂ ಪ್ರಾಬಲ್ಯ ತೋರುವ ಸಾಮರ್ಥ್ಯ ಹೊಂದಿದ್ದರು. ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕನಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಹಿಮಾಚಲಪ್ರದೇಶ ಮಾಜಿ ಸಿಎಂ ವೀರಭದ್ರ ಸಿಂಗ್ ವಿಧಿವಶ
ಸೌರವ್ ಗಂಗೂಲಿ ಏಕದಿನ ಕ್ರಿಕೆಟ್ ನಲ್ಲಿ 311 ಪಂದ್ಯಗಳನ್ನಾಡಿದ್ದು 11363ರನ್ ಗಳಿಸಿದ್ದಾರೆ. ಸೌರವ್ ಗಂಗೂಲಿ 2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದರು. ಬಂಗಾಳ ಹುಲಿ ಸೌರವ್ ಗಂಗೂಲಿ ಅವರಿಗೆ ಅಭಿಮಾನಿಗಳ ದಂಡೇ ಇದೆ ಇಂದು ಸೋಷಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳಿಂದ ಹಲವಾರು ಕ್ರಿಕೆಟಿಗರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
https://www.instagram.com/p/CRDaMmsF6lv/?utm_source=ig_web_copy_link