
ಈ ಬಾರಿ ಸುದ್ದಿಯಲ್ಲಿ ಇರೋದು, ಇವರ ಮನೆಗೆ ಬಂದ ಸ್ಪೆಷಲ್ ಗೆಸ್ಟ್‌ನಿಂದಾಗಿ. ಆ ಗೆಸ್ಟೇ ಈ ಐಶಾರಾಮಿ ವ್ಯಾನಿಟಿ ವ್ಯಾನ್. ಸಿನೆಮಾ ನಟ-ನಟಿಯರು ವ್ಯಾನಿಟಿ ವ್ಯಾನ್‌ಗಳನ್ನಇಟ್ಟುಕೊಳ್ಳೊದು ಹೊಸದೇನಲ್ಲ…… ಅವರವರ ಬಜೆಟ್ ತಕ್ಕಹಾಗೆ ವ್ಯಾನಿಟಿ ವ್ಯಾನ್‌ಗಳನ್ನಇಟ್ಟುಕೊಂಡಿರುತ್ತಾರೆ. ಕೆಲವರ ಬಳಿ ಇರೋ ಐಶಾರಾಮಿ ವ್ಯಾನಿಟಿ ವ್ಯಾನ್‌ಗಳನ್ನ ನೋಡಿದ್ರಂತೂ ಹೈ-ಫೈ ಮನೆಯೇ ನೋಡಿದ ಹಾಗಾಗುತ್ತೆ. ಈಗ ಅಂತಹದ್ದೇ ಸೂಪರ್ ಡಿಲಕ್ಸ್ ವ್ಯಾನಿಟಿ ವ್ಯಾನ್ ಶಿಲ್ಪಾಶೆಟ್ಟಿಯವರಿಗೆ ಉಡುಗೊರೆಯಾಗಿ ಸಿಕ್ಕಿದೆ. ಈ ಉಡುಗೊರೆ, ಅವರಿಗೆ ಅವರೇ ಕೊಟ್ಟುಕೊಂಡಿದ್ದಾರೆ.
ತಮ್ಮ 47ನೇ ಹುಟ್ಟು ಹಬ್ಬದಂದು ಕಪ್ಪು ಬಣ್ಣದ ಈ ವ್ಯಾನಿಟಿ ವ್ಯಾನ್ ಐಶಾರಾಮಿ ಮತ್ತು ಫಿಟ್ನೆಸ್‌ನ ಅಂಶಗಳನ್ನ ಒಳಗೊಂಡಿದೆ. ಹೊರಭಾಗ ಕಡುಗಪ್ಪು ಬಣ್ಣದಿಂದ ಕಂಗೊಳಿಸೊ ಈ ವ್ಯಾನ್‌ನ ಮುಂಭಾಗ, ತೆಳುವಾದ ಮತ್ತು ಕೋನೀಯ ಹೆಡ್‌ಲ್ಯಾಂಪ್‌ಗಳನ್ನ ಹೊಂದಿದೆ. ಅದೇ ರೀತಿ ಮುಂಭಾಗದ ಬಂಪರ್‌ನ ಮೇಲೆ ದುಂಡಾದ ಹ್ಯಾಲೋಜೆನ್ ದೀಪಗಳು ಇರುವುದನ್ನ ನೋಡಬಹುದಾಗಿದೆ. ಇನ್ನು ಈ ವ್ಯಾನಿಟಿ ವ್ಯಾನ್‌ನ ಮಧ್ಯೆ ಭಾಗದಲ್ಲಿ SSK ಎಂದು ಬರೆಯಲಾಗಿದ್ದು ಇದರ ಅರ್ಥ ಶಿಲ್ಪಾಶೆಟ್ಟಿ ಕುಂದ್ರಾ. ಭಿನ್ನ ಲುಕ್ ಹೊಂದಿರೋ ಈ ವ್ಯಾನಿಟಿ ವ್ಯಾನ್ ಬಾಲಿವುಡ್ನಲ್ಲಿ ಯಾರ ಬಳಿಯೂ ಇಲ್ಲ ಅನ್ನೋದು ಇನ್ನೊಂದು ವಿಶೇಷ.
ಇನ್ನು ಈ ವ್ಯಾನ್ ಒಳಭಾಗದಲ್ಲಿ ನೋಡಿದ್ರೆ, ಯಾವ ಪಂಚತಾರಾ ಹೊಟೇಲ್ಗಿಂತಲೂ ಕಡಿಮೆ ಇಲ್ಲ. ಕ್ಯಾಬಿನ್, ಅಡುಗೆ ಕೋಣೆ, ವಿಶ್ರಾಂತಿ ಕೋಣೆ, ಮತ್ತು ಮೇಕಪ್ ಕೋಣೆ, ಇವೆಲ್ಲವೂ ಈ ವ್ಯಾನ್ ಒಳಗೆ ನೋಡಬಹುದು. ಅಡುಗೆ ಮನೆಯಲ್ಲಿ ಮೈಕ್ರೋವೇವ್ ಓವನ್ ಸೇರಿದಂತೆ ಒಂದು ಅಡುಗೆ ಕೋಣೆಯಲ್ಲಿ ಇರಬೇಕಾದ ಎಲ್ಲ ಸೌಲಭ್ಯಗಳು ಇದರಲ್ಲಿ ಇವೆ. ಇನ್ನೂ ಎಲ್ ಆಕಾರದ ಕ್ಯಾಬಿನೆಟ್ ಈ ವ್ಯಾನ್‌ನ ಕೇಂದ್ರಬಿಂದು. ಎಸಿ ಲಾಂಜ್, ಮಂಚ,ಸೋಫಾ, ಕುರ್ಚಿ ಟೇಬಲ್, ಕನ್ನಡಿ ಮತ್ತು ರೂಫ್ ಟಾಪ್ ಲೈಟ್‌ಗಳು ಒಂದಕ್ಕಿಂತ ಒಂದು ಅದ್ಭುತ ವ್ಯವಸ್ಥೆ ಈ ವ್ಯಾನ್‌ನಲ್ಲಿ ನೋಡಬಹುದಾಗಿದೆ.ಇನ್ನೂ ಇದೇ ವ್ಯಾನ್ನಲ್ಲಿ ಯೋಗಕ್ಕೆಂದೇ ಸ್ಥಳವನ್ನ ಮೀಸಲಾಗಿ ಇಡಲಾಗಿದೆ. ಒಟ್ಟಿನಲ್ಲಿ ಈ ವ್ಯಾನ್ ನೋಡ್ತಿದ್ರೆ ಶಿಲ್ಪಾ ಶೆಟ್ಟಿಗೆನೇ ಹೇಳಿ ಮಾಡಿಸಿದಂತಿದೆ.
ಶಿಲ್ಪಾಶೆಟ್ಟಿ ಕುಂದ್ರಾ ತಮ್ಮ ಬಳಿ ಇರುವಂತಹ ವ್ಯಾನಿಟಿ ವ್ಯಾನ್‌ನಲ್ಲಿ ಏನೆಲ್ಲ ಇರಬೇಕು ಅಂತ ಬಯಸಿದ್ದರೋ ಅದೆಲ್ಲವೂ ಈ ವ್ಯಾನ್‌ನಲ್ಲಿ ಅಳವಡಿಸಲಾಗಿದೆ. ಶಿಲ್ಪಾಶೆಟ್ಟಿ ತಮ್ಮ ಜನುಮ ದಿನದಂದೇ ಈ ವ್ಯಾನ್ ಖರೀದಿಸಿ ತಮಗೆ ತಾವೇ ಗಿಫ್ಟ್ ಕೊಟ್ಟುಕೊಂಡಿರೋದು ವಿಶೇಷ. ಈಗ ತಾನು ಇನ್ನಷ್ಟು ಸಮಯ ಯೋಗಕ್ಕಾಗಿ ಮೀಸಲಿಡಬಹುದೆಂದು ಖುಷಿಯಿಂದ ಶಿಲ್ಪಾ ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ವ್ಯಾನ್‌ನಲ್ಲಿ ಖುಷಿ ಹಂಚಿಕೊಂಡಿರೋ ಶಿಲ್ಪಾ, ಈ ವ್ಯಾನಿಟಿ ವ್ಯಾನ್‌ನ ಫೋಟೋವನ್ನ ಶೇರ್ ಮಾಡಿಕೊಂಡಿದ್ದಾರೆ. ಶಿಲ್ಪಾ ಅಭಿಮಾನಿಗಳು, ಶಿಲ್ಪಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೊರುವುದರ ಜೊತೆಗೆ ಈ ಐಶಾರಾಮಿ ವ್ಯಾನಿಟಿ ವ್ಯಾನ್ ನೋಡಿ ಅದ್ಭುತ ಅಂತ ಹೇಳುತ್ತಿದ್ದಾರೆ. ಶಿಲ್ಪಾ ಅಭಿಮಾನಿಗಳ ಸಂದೇಶಕ್ಕೆ ಧನ್ಯವಾದವನ್ನ ಹೇಳಿದ್ದಾರೆ.
