ಮಕ್ಕಳ ಹುಟ್ಟುಹಬ್ಬವನ್ನು ಜನರು ಅದ್ಧೂರಿಯಾಗಿ ಆಚರಿಸ್ತಾರೆ. ದೊಡ್ಡವರು ಕೂಡ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ತಾರೆ. ಹುಟ್ಟುಹಬ್ಬದ ದಿನದಂದು ಮಾಡುವ ಕೆಲ ತಪ್ಪುಗಳು ಭವಿಷ್ಯದಲ್ಲಿ ಸಂಕಷ್ಟ ತರುತ್ತದೆ.
ಜನ್ಮದಿನದಂದು ಮನೆಯ ಹಿರಿಯ ಸದಸ್ಯರನ್ನು ಮರೆತುಬಿಡುತ್ತಾರೆ. ಇದು ತಪ್ಪು. ಮನೆ ಹಿರಿಯರ ಆಶೀರ್ವಾದವನ್ನು ಜನ್ಮದಿನದಂದು ಪಡೆಯಬೇಕು.
ಜನ್ಮದಿನದಂದು ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ, ದೇವರಿಗೆ ಅವಶ್ಯವಾಗಿ ನಮಸ್ಕರಿಸಬೇಕು. ಸಾದ್ಯವಾದ್ರೆ ದೇವಸ್ಥಾನಗಳಿಗೆ ಹೋಗಿ ಬರಬೇಕು.
ಹುಟ್ಟುಹಬ್ಬದಂದು ಯಾವುದೇ ಪ್ರಾಣಿಯನ್ನು ಕೊಲ್ಲಬಾರದು. ಈ ದಿನವು ಸಂತೋಷದ ದಿನವಾಗಿದ್ದು, ಯಾವುದೇ ಹಿಂಸೆ ಸಲ್ಲದು.
ಜನ್ಮದಿನದಂದು ಮಾಂಸ ಸೇವಿಸಬಾರದು.