‘ಕೆಜಿಎಫ್’ ಸರಣಿ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗವೇ ಬೆರಗುಗೊಳ್ಳುವಂತೆ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಸಮಾಜಮುಖಿ ಕಾರ್ಯಗಳಲ್ಲೂ ಮುಂದಿರುತ್ತಾರೆ. ತಮ್ಮ ತಂದೆಯವರ 75ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಶಾಂತ್ ನೀಲ್ ಅವರು ಮಾಡಿರುವ ಕಾರ್ಯವೊಂದು ಈಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಮೂಲತಃ ಆಂಧ್ರಪ್ರದೇಶದ ನೀಲಕಂಠಂಪುರಂನವರಾದ ಪ್ರಶಾಂತ್ ನೀಲ್, ತಮ್ಮ ಹುಟ್ಟೂರಿನಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಿನಾಸ್ಪತ್ರೆಗೆ ತಂದೆಯವರ 75 ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಹೆಸರಿನಲ್ಲೇ 50 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಈ ವಿಷಯವನ್ನು ಪ್ರಶಾಂತ್ ನೀಲ್ ಅವರ ಚಿಕ್ಕಪ್ಪ ಆಂಧ್ರಪ್ರದೇಶ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಡಾ. ಎನ್. ರಘುವೀರರೆಡ್ಡಿ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ತಿಳಿಸಿದ್ದು, ಇದರಿಂದ ಎಸ್.ವಿ. ಪ್ರಸಾದ್ ಕಣ್ಣಿನ ಆಸ್ಪತ್ರೆ ಹಲವರ ಪಾಲಿಗೆ ಬೆಳಕಾಗಲಿದೆ ಎಂದು ತಿಳಿಸಿದ್ದಾರೆ.