ಭಾರತೀಯ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳಿಗೂ ಸಾಕಷ್ಟು ಬೇಡಿಕೆಯಿದೆ. ಹೀರೋ, ಸುಜುಕಿ, ಹೋಂಡಾ ಮತ್ತು ಟಿವಿಎಸ್‌ನಂತಹ ದೊಡ್ಡ ಕಂಪನಿಗಳ ನಡುವೆ ಪೈಪೋಟಿ ಇದೆ. ಹೀರೋ ಮೋಟೋ ಕಾರ್ಪ್‌ನ ಬೈಕ್‌ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಆದರೆ ಸ್ಕೂಟರ್‌ಗಳ ವಿಷಯದಲ್ಲಿ ಹೋಂಡಾಗೆ ಯಾವುದೇ ಸ್ಪರ್ಧೆಯಿಲ್ಲ.ಎಲ್ಲಾ ಕಂಪನಿಗಳನ್ನು ಹಿಂದಿಕ್ಕಿ ಹೋಂಡಾ ಮತ್ತೊಮ್ಮೆ ಹೆಚ್ಚು ಮಾರಾಟವಾಗುವ ಸ್ಕೂಟರ್ ಎನಿಸಿಕೊಂಡಿದೆ.
ಏಪ್ರಿಲ್ 2023 ರಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ 5 ಸ್ಕೂಟರ್‌ಗಳ ಪಟ್ಟಿಯನ್ನು ನೋಡೋಣ. ಹೋಂಡಾ ಆಕ್ಟಿವಾ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಸ್ಕೂಟರ್ ಎನಿಸಿಕೊಂಡಿದೆ. ಇದು ಎಲ್ಲಾ ಇತರ ಕಂಪನಿಗಳನ್ನು ಭಾರಿ ಅಂತರದಿಂದ ಹಿಂದಿಕ್ಕಿದೆ. ಏಪ್ರಿಲ್ ತಿಂಗಳಲ್ಲಿ ಈ ಹೋಂಡಾ ಆಕ್ಟಿವಾದ 1,63,357 ಯುನಿಟ್‌ಗಳು ಮಾರಾಟವಾಗಿವೆ. ಏಪ್ರಿಲ್ 2022 ಕ್ಕೆ ಹೋಲಿಸಿದರೆ, ಹೋಂಡಾ ಆಕ್ಟಿವಾ 50 ಪ್ರತಿಶತಕ್ಕಿಂತ ಹೆಚ್ಚಿನ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ.
ಇತ್ತೀಚೆಗೆ ಕಂಪನಿಯು ಆಕ್ಟಿವಾ ಹೆಸರಿನಿಂದ 6G ನಾಮಫಲಕವನ್ನು ತೆಗೆದುಹಾಕಲು ನಿರ್ಧರಿಸಿದೆ. ಈಗ ಅದು ಹೋಂಡಾ ಆಕ್ಟಿವಾ ಎಂದು ಮಾತ್ರ ಗುರುತಿಸಿಕೊಳ್ಳಲಿದೆ. ಟಿವಿಎಸ್ ಜೂಪಿಟರ್ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದು ಕೇವಲ 59,583 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲು ಯಶಸ್ವಿಯಾಗಿದೆ. ಟಿವಿಎಸ್ ಜೂಪಿಟರ್ ಮಾರಾಟ ಏಪ್ರಿಲ್ 2022ಕ್ಕೆ ಹೋಲಿಸಿದರೆ ಶೇ. 2 ರಷ್ಟು ಕುಸಿತ ಕಂಡಿದೆ. ಸುಜುಕಿ ಆಕ್ಸೆಸ್ 52,231 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮೂರನೇ ಸ್ಥಾನದಲ್ಲಿದೆ. TVS Ntorq ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, Hero Xoom ಸ್ಕೂಟರ್ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.