ಹೀರೋ ಮೋಟೋ ಕಾರ್ಪ್ ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆ. ಹೀರೋ ಮೋಟೋಕಾರ್ಪ್ ಭಾರತದಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯು ಆಫ್-ರೋಡಿಂಗ್ ಸಾಮರ್ಥ್ಯದ ಮೋಟಾರ್‌ಸೈಕಲ್‌ಗಳಿಗೆ ಬೆಸ್ಟ್ ಆಯ್ಕೆಗಳನ್ನು ನೀಡುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹೀರೋ ಕಂಪನಿಯ ಮೋಟಾರ್ ಸೈಕಲ್‌ಗಳ ವಿವರ ಇಲ್ಲಿದೆ.
ಹೀರೋ ಸ್ಪ್ಲೆಂಡರ್
ಕಳೆದ ತಿಂಗಳು ಹೀರೋ ಮೋಟೋಕಾರ್ಪ್ನ ಸ್ಪ್ಲೆಂಡರ್ ಬೈಕ್ ಅತಿ ಹೆಚ್ಚು ಮಾರಾಟವಾಗಿದೆ. ಇದು ಹೀರೋ ಕಂಪನಿಯ ಹಳೆಯ ಮಾದರಿಗಳಲ್ಲಿ ಒಂದು. ಹೀರೋ ಸ್ಪ್ಲೆಂಡರ್‌ನ ಶುದ್ಧ ವಿನ್ಯಾಸ ಮತ್ತು ಇಂಧನ ಸಮರ್ಥತೆಗೆ ಗ್ರಾಹಕರನ್ನು ಆಕರ್ಷಿಸುತ್ತದೆ. ಇದು ಯಾವಾಗಲೂ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಹೀರೋ ಬೈಕ್ ಅನ್ನೋದು ವಿಶೇಷ. ಇದರ ಬೆಲೆ ರೂ. 71,176 ರೂಪಾಯಿಯಿಂದ ಪ್ರಾರಂಭ. ಸೆಪ್ಟೆಂಬರ್ ತಿಂಗಳಿನಲ್ಲಿ 2,61,081 ಸ್ಪ್ಲೆಂಡರ್ ಬೈಕ್‌ಗಳು ಮಾರಾಟವಾಗಿದ್ದು, ಶೇ.6 ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿದೆ. 2021ರ ಸೆಪ್ಟೆಂಬರ್‌ನಲ್ಲಿ 2,46,009 ಯುನಿಟ್‌ಗಳು ಸೇಲ್ ಆಗಿದ್ದವು.
ಹೀರೋ HF ಡಿಲಕ್ಸ್
ಹೀರೋ HF ಡಿಲಕ್ಸ್ ಸೆಪ್ಟೆಂಬರ್ನಲ್ಲಿ ಅತಿ ಹೆಚ್ಚು ಬಿಕರಿಯಾದ Hero MotoCorpನ ಎರಡನೇ ಮೋಟಾರ್ ಸೈಕಲ್. ಇದು 100cc ಎಂಜಿನ್‌ನೊಂದಿಗೆ ಬರುತ್ತದೆ. Hero HF ಡಿಲಕ್ಸ್ ಹಲವಾರು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಬೆಲೆ 60,308 ರಿಂದ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 2022 ರಲ್ಲಿ 93,596 HF ಡೀಲಕ್ಸ್ ಬೈಕ್‌ಗಳು ಮಾರಾಟವಾಗಿವೆ. ಆದರೆ ಈ ಬೈಕ್‌ನ ಮಾರಾಟ ವಾರ್ಷಿಕ ಶೇ.30ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಸಮಯದಲ್ಲಿ 1,34,539 ಹೆಚ್‌ಎಫ್ ಡಿಲಕ್ಸ್‌ಗಳು ಮಾರಾಟವಾಗಿದ್ದವು.
ಹೀರೋ ಗ್ಲಾಮರ್
ಕಳೆದ ತಿಂಗಳು ಹೀರೋ ಗ್ಲಾಮರ್ ಬೈಕ್‌ಗಳಿಗೆ ಕೂಡ ಸಾಕಷ್ಟು ಬೇಡಿಕೆ ಇತ್ತು. 125 ಸಿಸಿ ಕಮ್ಯೂಟರ್ ಗ್ಲಾಮರ್ ಬಹು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಬೆಲೆ 78,000 ರೂಪಾಯಿಯಿಂದ ಪ್ರಾರಂಭ. ಸೆಪ್ಟೆಂಬರ್‌ನಲ್ಲಿ 38,266 ಯುನಿಟ್ ಗ್ಲಾಮರ್ ಬೈಕ್‌ಗಳು ಮಾರಾಟವಾಗಿವೆ. ಇದರ ಮಾರಾಟವು 42 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. 2021ರ ಸಪ್ಟೆಂಬರ್‌ನಲ್ಲಿ 26,866 ಯುನಿಟ್‌ಗಳು ಮಾರಾಟವಾಗಿದ್ದವು.