alex Certify ಹೀಗೆ ಮಾಡೋದ್ರಿಂದ ಕರಗುತ್ತೆ ಕತ್ತಿನ ಭಾಗದ ಕೊಬ್ಬು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡೋದ್ರಿಂದ ಕರಗುತ್ತೆ ಕತ್ತಿನ ಭಾಗದ ಕೊಬ್ಬು

ಮುಖದ ಕೆಳಗೆ ಕತ್ತಿನ ಮೇಲ್ಭಾಗದಲ್ಲಿ ಕೊಬ್ಬು ಶೇಖರವಾಗಿ ನಿಮ್ಮ ಮುಖದ ಅಂದ ಕೆಟ್ಟಿದೆ ಎಂಬ ಬೇಸರ ನಿಮಗಿದ್ದರೆ ಇಲ್ಲೊಂದಿಷ್ಟು ಸಲಹೆಗಳಿವೆ. ಇದರಿಂದ ಸುಂದರ ಅಕರ್ಷಕ ರೂಪವನ್ನು ನೀವು ಪಡೆದುಕೊಳ್ಳಬಹುದು.

ಮುಖದಲ್ಲಿ ಒಟ್ಟು 43 ಮಾಂಸಖಂಡಗಳಿದ್ದು ಪ್ರತಿಯೊಂದಕ್ಕೂ ಸಮನಾದ ವ್ಯಾಯಾಮ ಸಿಗುವಂತಾಗಬೇಕು. ಇದರಿಂದ ಮಾಂಸಖಂಡಗಳ ಬೊಜ್ಜು ಕಡಿಮೆಯಾಗುತ್ತದೆ. ಯೋಗ ವಿಧಾನಗಳಿಂದ ಇದನ್ನು ಕಡಿಮೆ ಮಾಡಬಹುದು. ಅಂತರ್ಜಾಲದಲ್ಲಿ ಸಿಗುವ ಆಸನಗಳನ್ನು ನೋಡಿ ಕಲಿತು ಅಭ್ಯಸಿಸಿ.
ಚೂಯಿಂಗ್ ಗಮ್ ಜಗಿಯುವುದರಿಂದ ಮುಖದ ಎಲ್ಲ ಮಾಂಸ ಖಂಡಗಳಿಗೆ ವ್ಯಾಯಾಮ ಸಿಕ್ಕಂತಾಗುತ್ತದೆ. ಫೇಶಿಯಲ್ ಮಸಾಜ್ ಕೂಡಾ ಒಂದು ಹಂತದವರೆಗೆ ಉಪಕಾರಿ.

ದೇಹದ ತೂಕ ಕಡಿಮೆಯಾದಾಗ ಕುತ್ತಿಗೆಯ ಕೊಬ್ಬು ಸಹಜವಾಗಿಯೇ ಕರಗುತ್ತದೆ. ಅದಕ್ಕಾಗಿ ಪ್ರತಿನಿತ್ಯ ವಾಕಿಂಗ್ ಮಾಡಿ. ಆರೋಗ್ಯಕ್ಕೆ ಪ್ರಯೋಜನವಾಗುವ ತಿನಿಸುಗಳನ್ನೇ ಸೇವಿಸಿ. ಮೇಕಪ್ ನಿಂದಲೂ ಮುಖದ ಕೊಬ್ಬನ್ನು ಮರೆಮಾಚಬಹುದು. ಅದನ್ನು ಕಲಿತುಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...