ಮೊಬೈಲ್ ಬಳಕೆದಾರರ ಅದರಲ್ಲಿಯೂ ಸ್ಮಾರ್ಟ್ ಪೋನ್ ಬಳಕೆದಾರರ ಸಂಖ್ಯೆ ಇತ್ತೀಚೆಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ.
ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದರೂ, ಅದನ್ನು ಚಾರ್ಜ್ ಮಾಡುವ ಕುರಿತಾಗಿ ಬಹುತೇಕರಿಗೆ ಸ್ಪಷ್ಟ ಮಾಹಿತಿಯೇ ಇರುವುದಿಲ್ಲ. ಸ್ಮಾರ್ಟ್ ಫೋನ್ ಚಾರ್ಜಿಂಗ್ ಮಾಡುವ ಕುರಿತಾದ ಕೆಲವೊಂದು ಮಾಹಿತಿ ಇಲ್ಲಿದೆ ನೋಡಿ.
ಕೆಲವೊಮ್ಮೆ ಓವರ್ ಚಾರ್ಜ್ ಮಾಡುವುದರಿಂದ ಮೊಬೈಲ್ ನಲ್ಲಿ ಬ್ಯಾಟರಿ ಚಾರ್ಜ್ ಹೆಚ್ಚು ಕಾಲ ಉಳಿಯಲ್ಲ. ಫುಲ್ ಚಾರ್ಜ್ ಆದ ಸಂದರ್ಭದಲ್ಲಿ ಮತ್ತೆ ಚಾರ್ಜಿಂಗ್ ಗೆ ಹಾಕಬಾರದು.
ಹೈ ವೋಲ್ಟೇಜ್ ಇರುವಾಗ ಚಾರ್ಜ್ ಮಾಡಬಾರದು. ಅಲ್ಲದೇ, ಒಂದೇ ಬಾರಿ ಹೆಚ್ಚು ಸಮಯ ಚಾರ್ಜಿಂಗ್ ಮಾಡುವ ಬದಲಿಗೆ, ಸಿಕ್ಕ ಅಲ್ಪ, ಸ್ವಲ್ಪ ಅವಧಿಯಲ್ಲೇ ಚಾರ್ಜಿಂಗ್ ಮಾಡಿಕೊಳ್ಳಿ.
ಅಲ್ಲದೇ, ಸ್ಮಾರ್ಟ್ ಫೋನ್ ಅನ್ನು ಹೀಟ್ ಆಗದಂತೆ ತಡೆಯಿರಿ. ಪದೇ, ಪದೇ ಹೀಟ್ ಆದಲ್ಲಿ ಬ್ಯಾಟರಿಯನ್ನು ಪರಿಶೀಲಿಸಿ, ಸಲಹೆ ಪಡೆದುಕೊಳ್ಳಿ.