ಒಂದೇ ರೀತಿಯ ಆಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಈ ಬಾರಿ ಮಿಕ್ಸ್ ವೆಜ್ ಪಲಾವ್ ರುಚಿ ನೋಡಿ.
ಮಿಕ್ಸ್ ವೆಜ್ ಪಲಾವ್ ಮಾಡಲು ಬೇಕಾಗುವ ಪದಾರ್ಥ :
ಒಂದು ಈರುಳ್ಳಿ
8-10 ಬೀನ್ಸ್
ಸಣ್ಣ ಎಲೆಕೋಸು
ಒಂದು ಕ್ಯಾರೆಟ್
ಒಂದು ಕಪ್ ಅಣಬೆ
ಒಂದು ಕಪ್ ಬಾಸ್ಮತಿ ಅಕ್ಕಿ
ಒಂದು ಕಪ್ ಬಟಾಣಿ
3-4 ಲವಂಗ ಮತ್ತು ಕರಿಮೆಣಸು
2-3 ಸಣ್ಣ ಏಲಕ್ಕಿ
ಸಣ್ಣ ದಾಲ್ಚಿನ್ನಿ
ಅರ್ಧ ಚಮಚ ಜೀರಿಗೆ
ಸ್ವಲ್ಪ ಬೇವಿನ ಎಲೆ
50 ಗ್ರಾಂ ಬೆಣ್ಣೆ
ಎರಡು ಕಪ್ ನೀರು
ರುಚಿಗೆ ತಕ್ಕಷ್ಟು ಉಪ್ಪು
ಎರಡು ಚಮಚ ನಿಂಬೆ ರಸ
ಮಿಕ್ಸ್ ವೆಜ್ ಪಲಾವ್ ಮಾಡುವ ವಿಧಾನ :
ಮೊದಲು ಎಲ್ಲಾ ತರಕಾರಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಪ್ಯಾನ್ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಇದಕ್ಕೆ ಬೆಣ್ಣೆ ಅಥವಾ ತುಪ್ಪ ಸೇರಿಸಿ.ಉಳಿದ ಮಸಾಲೆ ಸೇರಿಸಿ 2 ನಿಮಿಷ ಬೆರೆಸಿ. ನಂತ್ರ ನುಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ, ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತ್ರ ಎಲ್ಲಾ ತರಕಾರಿಗಳನ್ನು ಸೇರಿಸಿ ಮತ್ತು 5 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ. ತರಕಾರಿಗಳು ಸ್ವಲ್ಪ ಮೃದುವಾದಾಗ ಅದಕ್ಕೆ ಅಕ್ಕಿ ಸೇರಿಸಿ. ನಂತ್ರ ಉಪ್ಪನ್ನು ಹಾಕಿ. ಬಾಣಲೆಗೆ ನೀರು, ನಿಂಬೆ ರಸ ಸೇರಿಸಿ ಕವರ್ ಮಾಡಿ 15 ನಿಮಿಷ ಬೇಯಿಸಿ. 15 ನಿಮಿಷಗಳ ನಂತರ ಗ್ಯಾಸ್ ಬಂದ್ ಮಾಡಿ. ಸ್ವಲ್ಪ ಸಮಯ ಬಿಟ್ಟು ಬಿಸಿಬಿಸಿಯಾಗಿ ಬಡಿಸಿ.