ಅಡುಗೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಕಾಡುವ ಸಮಸ್ಯೆಯಲ್ಲಿ ಪಾತ್ರೆ ಸ್ವಚ್ಛಗೊಳಿಸುವುದು ಒಂದು. ಆಲ್ಯೂಮಿನಿಯಂ ಪಾತ್ರೆ ಇರಲಿ ಕಬ್ಬಿಣದ ಕಡಾಯಿ ಇರಲಿ. ಅಡುಗೆ ಮಾಡಿದ ನಂತ್ರ ಅದನ್ನು ಸ್ವಚ್ಛಗೊಳಿಸೋದು ಸವಾಲಿನ ಕೆಲಸ. ಪಾತ್ರೆ ಬಳಸಿ ಬಳಸಿ ತಳ ಕಪ್ಪಾಗಿರುತ್ತದೆ. ಎಷ್ಟೇ ಕಸರತ್ತು ಮಾಡಿದ್ರೂ ಈ ಕಲೆ ಹೋಗೋದಿಲ್ಲ.
ಕೆಲವೊಂದು ಉಪಾಯ ಮಾಡಿದ್ರೆ ಪಾತ್ರೆ ಕಪ್ಪಾಗದಂತೆ ನೋಡಿಕೊಳ್ಳಬಹುದು. ಪಾತ್ರೆಯ ಹೊರಗೆ ಎಲ್ಲ ಕಡೆ ಹಸಿ ಮಣ್ಣಿನ ಲೇಪ ಮಾಡಿ ನಂತ್ರ ಪಾತ್ರೆಯನ್ನು ಒಲೆ ಮೇಲಿಡಿ. ಪಾತ್ರೆ ತೊಳೆದಾಗ ಮಣ್ಣು ಸ್ವಚ್ಛವಾಗಿ ಹೋಗುತ್ತದೆ. ಆದ್ರೆ ಪಾತ್ರೆ ಹೊರಗಿನ ಭಾಗ ಮಾತ್ರ ಕಪ್ಪಾಗುವುದಿಲ್ಲ. ಮಣ್ಣು, ಪಾತ್ರೆ ಕಪ್ಪಾಗುವುದನ್ನು ತಡೆಯುತ್ತದೆ.
ಎಲ್ಲ ಕಡೆ ಮಣ್ಣು ಸಿಗೋದು ಕಷ್ಟ. ಅಂತವರು ಮಣ್ಣಿನ ಬದಲು ಉಪ್ಪು ಮತ್ತು ನೀರನ್ನು ಬಳಸಬಹುದು. ಪಾತ್ರೆ ಹೊರಕ್ಕೆ ಮೊದಲು ನೀರು ಹಾಕಿ. ಅದ್ರ ಮೇಲೆ ಉಪ್ಪನ್ನು ಉದುರಿಸಿ. ಇದ್ರಿಂದಲೂ ಪಾತ್ರೆ ಕಪ್ಪಾಗುವುದನ್ನು ತಡೆಯಬಹುದು.