ಪ್ರತಿದಿನ ನಾವು ಸಾಕಷ್ಟು ಕೆಲಸಗಳನ್ನು ಮಾಡ್ತೇವೆ. ಇದ್ರಲ್ಲಿ ತಿಳಿಯದೆಯೇ ಅನೇಕ ತಪ್ಪುಗಳಾಗಿ ಹೋಗ್ತವೆ. ಇದು ನಮ್ಮ ಸಂಸಾರ, ಆರ್ಥಿಕ ಜೀವನ ಹಾಗೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
ಹಾಗಾಗಿ ಕೆಲವೊಂದು ವಿಷಯಗಳನ್ನು ನಾವು ತಿಳಿದುಕೊಳ್ಳುವುದು ಬಹಳ ಮುಖ್ಯ. ತಿಳಿಯುವ ಜೊತೆಗೆ ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಖಕರವಾಗಿರುತ್ತದೆ.
ಸ್ನಾನ ಗೃಹವನ್ನು ಚಂದ್ರನ ಸ್ಥಳವೆಂದು ಪರಿಗಣಿಸಲಾಗಿದೆ. ಸ್ನಾನ ಗೃಹ ಸ್ವಚ್ಛವಾಗಿಲ್ಲವಾದಲ್ಲಿ ಚಂದ್ರ ಮುನಿಸಿಕೊಳ್ತಾನೆ. ಇದ್ರಿಂದ ಸಂಸಾರದಲ್ಲಿ ಗಲಾಟೆ ಹಾಗೂ ಆರ್ಥಿಕ ಸಮಸ್ಯೆ ಎದುರಾಗುತ್ತದೆ.
ಹಾಗೆ ಊಟ ಮಾಡುವಾಗ ಪ್ಲೇಟ್ ನಲ್ಲಿ ಆಹಾರವನ್ನು ಬಿಡಬಾರದು. ಜೊತೆಗೆ ರಾತ್ರಿ ಮಲಗುವಾಗ ಅಡುಗೆ ಮಾಡಿದ ಎಲ್ಲ ಪಾತ್ರೆಗಳನ್ನು ಸ್ವಚ್ಛವಾಗಿ ತೊಳೆದು ಮಲಗಬೇಕು. ಹೀಗೆ ಮಾಡದಿದ್ದಲ್ಲಿ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ.
ಮಲಗುವ ಕೋಣೆ ಕೂಡ ಸ್ವಚ್ಛವಾಗಿರಬೇಕು. ಕೊಠಡಿಯಲ್ಲಿ ಕಸವಿರಬಾರದು. ಮಂಚಕ್ಕೆ ಹಾಕುವ ಬೆಡ್ ಶೀಟ್ ಹಾಗೂ ಹೊದಿಕೆಯನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಹಾಗೆ ಹೊದಿಕೆ ಹರಿದಿರಬಾರದು. ಇಂತ ಕೊಳಕು ಹಾಸಿಗೆ ಮೇಲೆ ಮಲಗಿದ್ರೆ ಸೌಭಾಗ್ಯ ದುರ್ಭಾಗ್ಯವಾಗಿ ಬದಲಾಗಲಿದೆ.
ಶಾಸ್ತ್ರಗಳ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯಬಾರದು. ಹೀಗೆ ಮಾಡಿದ್ರೆ ಮುನಿಸಿಕೊಂಡು ಲಕ್ಷ್ಮಿ ಮನೆಯಿಂದ ಹೊರಗೆ ಹೋಗ್ತಾಳೆ.