alex Certify ಹೀಗಿರಲಿ ನಿಮ್ಮ ‘ವಾರ್ಡ್ ರೋಬ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿರಲಿ ನಿಮ್ಮ ‘ವಾರ್ಡ್ ರೋಬ್’

11 Clothes Storage Ideas When You Have No Closetಬಟ್ಟೆ ಹಾಗೂ ಅಮೂಲ್ಯ ವಸ್ತುಗಳನ್ನಿಡಲು ಬೀರು ಬಹಳ ಮುಖ್ಯ. ಬೀರುವಿನಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ನೋಡಲು ಚೆನ್ನಾಗಿ ಕಾಣೋದಿಲ್ಲ. ಹಾಗೆ ಬೇಕಾದ ತಕ್ಷಣ ವಸ್ತುಗಳು ಕೈಗೆ ಸಿಗೋದಿಲ್ಲ. ಹಾಗಾಗಿ ಬಟ್ಟೆ ಹಾಗೂ ವಸ್ತುಗಳನ್ನು ಬೀರುವಿನಲ್ಲಿ ಸರಿಯಾಗಿಡಬೇಕು.

ಮೊದಲ ಕಪಾಟಿನೊಳಗೆ ಬಟ್ಟೆಯನ್ನು ಇಡುವ ಮೊದಲು ಪೇಪರ್ ಹಾಕಿ. ಬಟ್ಟೆ ಇಡುವ ಸ್ಥಳ ಕೊಳಕಾಗಿರಬಾರದು. ಹಾಗಾಗಿ ಮೊದಲು ಪೇಪರ್ ಹಾಕಿ ನಂತ್ರ ಬಟ್ಟೆ ಇಡಿ.

ದುಬಾರಿ ಬೆಲೆಯ ಸೀರೆ ಅಥವಾ ಸೂಟ್ ಇಡುವ ಮೊದಲು ಪೇಪರ್ ಕವರ್ ನಲ್ಲಿ ಸುತ್ತಿಡಿ. ಇದ್ರಿಂದ ಬಟ್ಟೆ ಹಾಳಾಗುವುದಿಲ್ಲ. ಜೊತೆಗೆ ಅನೇಕ ದಿನಗಳ ಕಾಲ ಬಟ್ಟೆ ಹೊಸದರಂತೆ ಕಾಣುತ್ತದೆ.

ಕಪಾಟಿಗೆ ಹುಳು ಬರದಂತೆ ನೋಡಿಕೊಳ್ಳಿ. ಡಾಂಬರ್ ಗುಳಿಗೆಯನ್ನು ಇಡಿ. ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಿ.

ಅವಶ್ಯಕತೆಗೆ ತಕ್ಕಂತೆ ಸಣ್ಣ ಹಾಗೂ ದೊಡ್ಡ ಬಟ್ಟೆಗಳನ್ನು ಬೇರೆ ಮಾಡಿ, ಬೇರೆ ಬೇರೆಯಾಗಿಡಿ.

ಋತುವಿಗೆ ಅಗತ್ಯವಿರುವ ಬಟ್ಟೆಯನ್ನು ಮಾತ್ರ ಇಡಿ. ಈ ಸಮಯಕ್ಕೆ ಬೇಡವಾದ ಬಟ್ಟೆಗಳನ್ನು ಬೇರೆ ಕಡೆ ತೆಗೆದಿರಿಸಿ.

ಮಕ್ಕಳ ಬಟ್ಟೆ ಹಾಗೂ ನಿಮ್ಮ ಬಟ್ಟೆಯನ್ನು ಬೇರೆ ಬೇರೆಯಾಗಿಡಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...