ನೀವು ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಜೊತೆಗೆ ಡೇಟಿಂಗ್ ಗೆ ಹೊರಟಿದ್ರೆ ಅಥವಾ ಇನ್ಯಾವುದೇ ಮಹತ್ವದ ಸಭೆಗೆ ಹೋಗುವಾಗ ಆ ಸಂದರ್ಭಕ್ಕೆ ತಕ್ಕಂತಹ ಚಪ್ಪಲಿ ಧರಿಸುವುದು ಬಹಳ ಮುಖ್ಯ.
ಯಾಕಂದ್ರೆ ಪಾದರಕ್ಷೆ ನಮ್ಮ ವ್ಯಕ್ತಿತ್ವದ ಕೈಗನ್ನಡಿಯಿದ್ದಂತೆ. ಮದುವೆ, ಔಟಿಂಗ್, ಪ್ರವಾಸ, ಟ್ರೆಕ್ಕಿಂಗ್, ಶಾಪಿಂಗ್ ಹೀಗೆ ಆಯಾ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ತೆರನಾದ ಪಾದರಕ್ಷೆಗಳನ್ನು ಧರಿಸಬೇಕು.
ಆರಾಮದಾಯಕವಾದ ಸ್ನೀಕರ್ ಶೂಗಳನ್ನು ನೀವು ಯಾವಾಗ ಬೇಕಾದ್ರೂ ಧರಿಸಬಹುದು. ಡೆನಿಮ್ ಹಾಗೂ ಕ್ಲಾಸಿಕಲ್ ಸ್ಟ್ರೇಟ್ ಡೆನಿಮ್ ಗಳ ಮೇಲೂ ಅವು ಚೆನ್ನಾಗಿ ಹೊಂದಿಕೆಯಾಗುತ್ತವೆ.
ವೆಜಸ್ ಗಳಂತೂ ನಿಮ್ಮ ಪಾದಗಳಿಗೆ ಹೇಳಿ ಮಾಡಿಸಿದಂತಿರುತ್ತವೆ. ಹೈಹೀಲ್ಡ್ ಅಂತಾ ಚಿಂತಿಸಬೇಕಿಲ್ಲ. ಪಾದ ನೋವು ಶುರುವಾಗಬಹುದೆಂಬ ಆತಂಕ ಬೇಡ. ಅವು ತುಂಬಾ ಮೃದುವಾಗಿರುವುದರಿಂದ ಕಾಲುಗಳಿಗೂ ಆರಾಮ ಸಿಗುತ್ತದೆ. ಎಲ್ಲಾ ತೆರನಾದ ಉಡುಪಿನ ಜೊತೆಗೂ ಹೊಂದಾಣಿಕೆಯಾಗುತ್ತದೆ.
ಲೋ ಪರ್ಸ್ ಸ್ಲಿಪ್ಪರ್ ಗಳು ಸಖತ್ ಕ್ಲಾಸಿ ಲುಕ್ ಕೊಡುತ್ತವೆ. ಜೊತೆಗೆ ಆರಾಮದಾಯಕವೂ ಹೌದು. ಇದನ್ನು ಶಾರ್ಟ್ಸ್ ಹಾಗೂ ಡೆನಿಮ್ ಎರಡರ ಜೊತೆಗೂ ಧರಿಸಬಹುದು. ಕಪ್ಪು, ನೀಲಿ ಮತ್ತು ಕಂದು ಬಣ್ಣದ ಚಪ್ಪಲಿಗಳನ್ನು ಆಯ್ದುಕೊಳ್ಳಿ.
ಇತ್ತೀಚೆಗೆ ಬಿಳಿಯ ಬೂಟುಗಳು ಫ್ಯಾಷನ್ ಆಗ್ಬಿಟ್ಟಿವೆ. ಅದನ್ನು ಕೂಡ ನೀವು ಕೊಂಡುಕೊಳ್ಳಬಹುದು. ನಿಮ್ಮ ಕ್ಯಾಶುವಲ್ ಕಲೆಕ್ಷನ್ ನಲ್ಲಿ ಅದು ಕೂಡ ಒಂದು. ಇದು ನಿಮ್ಮನ್ನು ಸಖತ್ ಕಲರ್ ಫುಲ್ ಆಗಿ ಕಾಣುವಂತೆ ಮಾಡುತ್ತದೆ, ನಿಮ್ಮ ಲುಕ್ ಇನ್ನಷ್ಟು ಸ್ಟೈಲಿಶ್ ಎನಿಸುತ್ತದೆ.