ಆರಂಭದಲ್ಲಿ ಕೈಕೊಟ್ಟಿದ್ದ ಮುಂಗಾರು ಈಗ ಮತ್ತೆ ಅಬ್ಬರಿಸತೊಡಗಿದ್ದು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಳ್ಳ ಕೊಳ್ಳಗಳು, ನದಿಗಳು ತುಂಬಿ ಹರಿಯುತ್ತಿವೆ. ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜಲಾಶಯಗಳ ನೀರಿನ ಮಟ್ಟದಲ್ಲೂ ಏರಿಕೆಯಾಗುತ್ತಿದೆ.
ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಗುರುವಾರದಂದು ಇಂತಿದ್ದು, ಇದರ ವಿವರ ಇಲ್ಲಿದೆ.
ಕೆ.ಆರ್.ಎಸ್. ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಈಗಿನ ಮಟ್ಟ 109.60 ಅಡಿಗಳಾಗಿದೆ.
ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿದ್ದು, ಈಗಿನ ಮಟ್ಟ 158 ಅಡಿಗಳಾಗಿದೆ.
ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1,819 ಅಡಿಗಳಾಗಿದ್ದು ಈಗಿನ ಮಟ್ಟ 1,784.40 ಅಡಿಗಳಾಗಿದೆ.
ತುಂಗಭದ್ರಾ ಜಲಾಶಯದ ಗರಿಷ್ಠ ಮಟ್ಟ 1,633 ಅಡಿಗಳಾಗಿದ್ದು, ಈಗಿನ ಮಟ್ಟ 1,615.56 ಅಡಿಗಳಾಗಿದೆ.
ಹಾರಂಗಿ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಈಗಿನ ಮಟ್ಟ 2,853.82 ಅಡಿಗಳಾಗಿದೆ.
ಕಬಿನಿ ಜಲಾಶಯದ ಗರಿಷ್ಠ ಮಟ್ಟ 2,284.00 ಅಡಿಗಳಾಗಿದ್ದು, ಈಗಿನ ಮಟ್ಟ 2,282.46 ಅಡಿಗಳಾಗಿದೆ.
ಹೇಮಾವತಿ ಗರಿಷ್ಠ ಮಟ್ಟ 2,922 ಅಡಿಗಳಾಗಿದ್ದು, ಈಗಿನ ಮಟ್ಟ 2910.75 ಅಡಿಗಳಾಗಿದೆ.
ಮಾಣಿ ಜಲಾಶಯದ ಗರಿಷ್ಠ ಮಟ್ಟ 595 ಅಡಿಗಳಾಗಿದ್ದು, ಈಗಿನ ಮಟ್ಟ 579.72 ಅಡಿಗಳಾಗಿದೆ.
ಸೂಪಾ ಗರಿಷ್ಠ ಮಟ್ಟ 564 ಅಡಿಗಳಾಗಿದ್ದು, ಈಗಿನ ಮಟ್ಟ 542.45 ಅಡಿಗಳಾಗಿದೆ.
ಮಲಪ್ರಭಾ ಗರಿಷ್ಠ ಮಟ್ಟ 2079.5 ಅಡಿಗಳಾಗಿದ್ದು, ಈಗಿನ ಮಟ್ಟ 2060.80 ಅಡಿಗಳಾಗಿದೆ.
ಘಟಪ್ರಭಾ ಗರಿಷ್ಠ ಮಟ್ಟ 2175 ಅಡಿಗಳಾಗಿದ್ದು, ಈಗಿನ ಮಟ್ಟ 2143.75 ಅಡಿಗಳಾಗಿದೆ.
ಆಲಮಟ್ಟಿ ಗರಿಷ್ಠ ಮಟ್ಟ 519.6 ಅಡಿಗಳಾಗಿದ್ದು, ಈಗಿನ ಮಟ್ಟ 517.37 ಅಡಿಗಳಾಗಿದೆ.
ನಾರಾಯಣಪುರ ಗರಿಷ್ಠ ಮಟ್ಟ 492.25 ಅಡಿಗಳಾಗಿದ್ದು, ಈಗಿನ ಮಟ್ಟ 490.67 ಅಡಿಗಳಾಗಿದೆ.