ಮೇಷ : ಕುಟುಂಬಸ್ಥರ ಸಮ್ಮುಖದಲ್ಲಿ ಕುಲದೇವರಿಗೆ ವಿಶೇಷ ಸೇವೆಯನ್ನು ಸಲ್ಲಿಸಲಿದ್ದೀರಿ. ಎಷ್ಟೇ ಹಣ ಸಂಪಾದನೆ ಮಾಡಿದರೂ ಉಳಿಯುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡಲಿದೆ. ದಾಂಪತ್ಯ ಜೀವನ ಸುಖಮಯವಾಗಿ ಇರಲಿದೆ.
ವೃಷಭ : ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಡ್ಡಿ ಬರುವಂತಹ ಪ್ರಸಂಗವೊಂದು ನಡೆಯಲಿದೆ. ಅನಗತ್ಯ ಕಾರಣಕ್ಕೆ ಧನವ್ಯಯ ಮಾಡಲಿದ್ದೀರಿ. ಆಸ್ತಿ ವಿಚಾರದಲ್ಲಿ ಇದ್ದ ಗೊಂದಲಗಳು ಪರಿಹಾರವಾಗಲಿದೆ. ಇಂದು ನೀವು ಚಿನ್ನಾಭರಣ ಖರೀದಿಸಲಿದ್ದೀರಿ.
ಮಿಥುನ : ಅನಿರೀಕ್ಷಿತ ವಿಚಾರಕ್ಕೆ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ವಿದ್ಯಾರ್ಥಿಗಳು ಅಂದುಕೊಂಡಿದ್ದನ್ನು ಸಾಧಿಸಲಿದ್ದಾರೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ.
ಕಟಕ : ಅನೇಕ ವರ್ಷಗಳ ಬಳಿಕ ನಿಮ್ಮ ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವಂತಹ ಪ್ರಸಂಗ ಎದುರಾಗಲಿದೆ. ಸಂಗಾತಿಯ ಜೊತೆಗಿನ ಹೊಂದಾಣಿಕೆ ಹೆಚ್ಚಲಿದೆ. ಕುಟುಂಬದ ಬಂಧುವೊಬ್ಬರು ಅಕಾಲಿಕ ಮರಣವನ್ನಪ್ಪಿದ ಬರಸಿಡಿಲಿನ ವಾರ್ತೆ ಕೇಳುವಿರಿ.
ಸಿಂಹ : ವಿದ್ಯಾರ್ಥಿಗಳ ಓದಿನಲ್ಲಿ ಅಡಚಣೆ ಉಂಟಾಗಬಹುದು. ಗುರು – ಹಿರಿಯರಲ್ಲಿ ಗೌರವ ಹೆಚ್ಚಲಿದೆ. ಸಂಗಾತಿಯು ನಿಮಗೆ ಬೆಲೆಬಾಳುವ ಉಡುಗೊರೆ ನೀಡಲಿದ್ದಾರೆ. ಮನೆಯ ಪೀಠೋಪಕರಣಗಳ ಖರೀದಿಗೆ ಧನವ್ಯಯವಾಗಲಿದೆ.
ಕನ್ಯಾ : ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಆಸ್ತಿ ವಿಚಾರದಲ್ಲಿ ಕುಟುಂಬಸ್ಥರ ವಿರೋಧ ಕಟ್ಟಿಕೊಳ್ಳಬಹುದಾದ ಪ್ರಸಂಗ ಎದುರಾದೀತು. ಸುಖಭೋಜನ ಪ್ರಾಪ್ತಿಯಾಗಲಿದೆ.
ತುಲಾ : ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ. ಹೀಗಾಗಿ ಕುಟುಂಬಸ್ಥರ ಜೊತೆ ಪ್ಲಾನ್ ಮಾಡಿದ್ದ ಪ್ರವಾಸ ರದ್ದಾಗಲಿದೆ. ಆಸ್ತಿ ವಿಚಾರಗಳು ಇತ್ಯರ್ಥವಾಗಲಿದೆ. ಸಂಗಾತಿಯೊಡನೆ ಮನಸ್ತಾಪ ಉಂಟಾಗಲಿದೆ. ವ್ಯಾಪಾರ – ವ್ಯವಹಾರಗಳು ಮಂದಗತಿಯಲ್ಲಿ ಸಾಗಲಿದೆ.
ವೃಶ್ಚಿಕ : ಕಳೆದ ಅನೇಕ ವರ್ಷಗಳಿಂದ ವೈವಾಹಿಕ ಸಂಬಂಧಕ್ಕಾಗಿ ಅರಸಿ ಹೈರಾಣಾಗಿದ್ದ ನೀವಿಂದು ನಿಟ್ಟಿಸಿರು ಬಿಡಬಹುದು. ಏಕೆಂದರೆ ಯೋಗ್ಯ ಸಂಬಂಧವೊಂದು ನಿಮ್ಮ ಮನೆ ಬಾಗಿಲಿಗೆ ಬರಲಿದೆ. ವಾಹನ ಖರೀದಿ ಮಾಡುವ ಸಾಧ್ಯತೆ ಇದೆ.
ಧನು : ಸಂಗಾತಿಯು ನಿಮ್ಮೆಲ್ಲ ಹೊಸ ಪ್ರಯೋಗಗಳಿಗೆ ಹೆಗಲಾಗಲಿದ್ದಾರೆ. ಸಾಲಭಾದೆ ನಿಮ್ಮನ್ನು ಕಾಡಲಿದೆ. ಕಚೇರಿಯಲ್ಲಿ ಹಿತಶತ್ರುಗಳ ಕಾಟವಿದೆ. ಯಾರ ಮೇಲೂ ಅತಿಯಾದ ನಂಬಿಕೆ ಬೇಡ. ವಿದ್ಯಾರ್ಥಿಗಳ ಚಂಚಲ ಮನಸ್ಸು ಅವರನ್ನು ಅವಕಾಶವಂಚಿತರನ್ನಾಗಿಸಲಿದೆ.
ಮಕರ : ಆಸ್ತಿ ವಿಚಾರದಲ್ಲಿ ಕಲಹ ಉಂಟಾಗಿರುವ ಪರಿಣಾಮ ಮನಸ್ಸಿನಲ್ಲಿ ಅಶಾಂತಿ ನೆಲೆಸಲಿದೆ. ಹಣದ ಮೋಹದಿಂದಾಗಿ ದುರಾಲೋಚನೆ ಮಾಡಲಿದ್ದೀರಿ. ಪುತ್ರರ ನಡುವೆ ದ್ವೇಷ ಹುಟ್ಟುಹಾಕುವಂತಹ ಘಟನೆಯೊಂದು ನಡೆಯಲಿದೆ.
ಕುಂಭ : ಪ್ರವಾಸಕ್ಕೆ ತೆರಳುವ ಅವಕಾಶ ಕೂಡಿ ಬಂದರೂ ಆರ್ಥಿಕ ಸಂಕಷ್ಟದಿಂದಾಗಿ ಈ ಯೋಜನೆಯಿಂದ ಹಿಂದೆ ಸರಿಯಲಿದ್ದೀರಿ. ಕೆಲಸದ ನಿಮಿತ್ತ ಅತಿಯಾಗಿ ಪ್ರಯಾಣ ಮಾಡಿ ದಣಿಯಲಿದ್ದೀರಿ. ಸ್ತ್ರೀಯರಿಂದ ಧನವ್ಯಯವಾಗಲಿದೆ .
ಮೀನ : ಉದ್ಯೋಗದಲ್ಲಿ ಬಡ್ತಿ ಭಾಗ್ಯ ಸಿಗುವುದರಿಂದ ತುಂಬಾನೇ ಸಂತಸಗೊಳ್ಳಲಿದ್ದೀರಿ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಬಗ್ಗೆ ಚಿಂತನೆ ನಡೆಯಲಿದೆ. ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ವಿವಾಹ ಯೋಗವಿದೆ.