ಇಂದಿನ ಕಾಲದಲ್ಲಿ ಕಾಮ ವ್ಯಕ್ತಿಯ ತಲೆಯ ಮೇಲೆ ಸವಾರಿ ಮಾಡ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ಸಂಬಂಧವನ್ನರಿಯದೆ ಶಾರೀರಿಕ ಸಂಬಂಧ ಬೆಳೆಸುತ್ತಾರೆ. ದೈಹಿಕ ಸಂಬಂಧ ಬೆಳೆಸುವ ಮೊದಲು ಸಾಕಷ್ಟು ವಿಚಾರ ನಡೆಸಬೇಕು. ಹಿಂದೂ ಧರ್ಮದಲ್ಲಿ ಯಾರ ಜೊತೆ ಸಂಬಂಧ ಬೆಳೆಸಬೇಕು, ಯಾರ ಜೊತೆ ಶಾರೀರಿಕ ಸಂಬಂಧ ಬೆಳೆಸಬಾರದು ಎಂಬುದನ್ನು ಹೇಳಲಾಗಿದೆ.
ಭಾರತೀಯ ಧರ್ಮಗ್ರಂಥಗಳ ಪ್ರಕಾರ ವಿಧವೆಯೊಂದಿಗೆ ದೈಹಿಕ ಸಂಬಂಧವನ್ನು ಮಾಡಬಾರದ. ಅವಳು ಸಂಬಂಧವನ್ನು ಹೊಂದಲು ಬಯಸಿದರೆ ಮೊದಲು ಅವಳನ್ನು ಮದುವೆಯಾಗಬೇಕು.
ಸ್ನೇಹಿತನ ಹೆಂಡತಿಯೊಂದಿಗೆ ದೈಹಿಕ ಸಂಬಂಧ ಬೆಳೆಸುವುದು ಪಾಪ. ಈ ಕಾರಣಕ್ಕೆ ಸ್ನೇಹಿತನ ಪತ್ನಿಯಿಂದ ದೂರವಿರಬೇಕು. ಹಿಂದೂ ಧರ್ಮಗ್ರಂಥಗಳಲ್ಲಿ ಸ್ನೇಹಿತನಿಗೆ ದ್ರೋಹ ಮಾಡುವುದು ಸೂಕ್ತವಲ್ಲ.
ಅಪ್ರಾಪ್ತ ಹುಡುಗ ಅಥವಾ ಹುಡುಗಿಯ ಜೊತೆ ದೈಹಿಕ ಸಂಬಂಧವನ್ನು ಬೆಳೆಸಬಾರದು.
ದಾರಿ ಮಧ್ಯದಲ್ಲಿ ಯಾವುದೇ ಮಹಿಳೆ ಜೊತೆ ಸಂಬಂಧ ಬೆಳೆಸಬಾರದು. ಶಾಸ್ತ್ರದ ಪ್ರಕಾರ ಮಾತ್ರವಲ್ಲ ಇದ್ರಿಂದ ಅಪಾಯವುಂಟಾಗುವ ಸಾಧ್ಯತೆಯಿರುತ್ತದೆ.
ಪ್ರಸಿದ್ಧ ಮಹಿಳೆಯಿಂದ ದೂರವಿರುವುದು ಒಳ್ಳೆಯದು. ಅವಳ ಜೊತೆ ಸಂಬಂಧ ಬೆಳೆಸುವುದು ಸೂಕ್ತವಲ್ಲ.
ಮಹಿಳೆ ಅಥವಾ ಪುರುಷನು ನಿಮಗಿಂತ ದೊಡ್ಡವನಾಗಿದ್ದರೆ, ಅವರೊಂದಿಗೆ ಸಂಬಂಧ ಬೆಳೆಸಬಾರದು ಎಂದು ಗ್ರಂಥಗಳು ಹೇಳುತ್ತವೆ. ಇದ್ರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಇದು ಪಾಪ ಎನ್ನಲಾಗಿದೆ.