ಹಿಂದೂ ಧರ್ಮದಲ್ಲಿ ಸಾಕಷ್ಟು ಪದ್ಧತಿಗಳು ಚಾಲ್ತಿಯಲ್ಲಿವೆ. ಈಗ್ಲೂ ಅನೇಕರು ಹಿಂದೂ ಧರ್ಮದ ಪದ್ಧತಿಗಳನ್ನು ಅನುಸರಿಸಿಕೊಂಡು ಬರ್ತಿದ್ದಾರೆ. ಋಷಿಮುನಿಗಳು ಅನೇಕ ಸಂಶೋಧನೆಗಳ ನಂತ್ರ ಪದ್ಧತಿಗಳನ್ನು ಜಾರಿಗೆ ತಂದಿದ್ದಾರೆ ಎಂಬ ಮಾತುಗಳಿವೆ. ಹಿಂದೂ ಧರ್ಮದ ಪ್ರತಿಯೊಂದು ಪದ್ಧತಿಯೂ ಅದರದೆ ಆದ ಮಹತ್ವವನ್ನು ಹೊಂದಿದೆ.
ಹಿರಿಯರ ಕಾಲನ್ನು ಕಿರಿಯರು ಮುಟ್ಟಿ ನಮಸ್ಕರಿಸುವ ಪದ್ಧತಿ ಹಿಂದೂ ಧರ್ಮದಲ್ಲಿದೆ. ನವ ವಧು ಗಂಡನ ಮನೆಗೆ ಬರ್ತಿದ್ದಂತೆ ಹಿರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾಳೆ. ಮದುವೆ ಸಂದರ್ಭದಲ್ಲಿ ಮಾತ್ರವಲ್ಲ ಮನೆಯಲ್ಲಿ ನಡೆಯುವ ಪ್ರತಿಯೊಂದು ವಿಶೇಷ ಸಂದರ್ಭಗಳಲ್ಲಿ, ದೂರದೂರಿಗೆ ಪ್ರಯಾಣ ಬೆಳೆಸುವ ವೇಳೆ ಕೂಡ ಹಿರಿಯರ ಕಾಲಿಗೆ ನಮಸ್ಕರಿಸುವ ಪದ್ಧತಿಯಿದೆ.
ಈಗ್ಲೂ ನೀವು ಈ ಪದ್ಧತಿ ರೂಢಿಸಿಕೊಂಡು ಬಂದಿದ್ದರೆ ಅದ್ರಿಂದ ಏನೆಲ್ಲ ಲಾಭವಿದೆ ಎಂಬುದನ್ನು ತಿಳಿಯಿರಿ. ಪಾದ ಮುಟ್ಟಿ ನಮಸ್ಕಾರ ಮಾಡುವುದ್ರಿಂದ ವಿನಯ, ನಮೃತೆ ಭಾವ ಮನಸ್ಸಿನಲ್ಲಿ ಮೂಡುತ್ತದೆ. ಹಿರಿಯರ ಸಕಾರಾತ್ಮಕ ಶಕ್ತಿ ನಮ್ಮನ್ನು ಸೇರುತ್ತದೆ. ಪ್ರತಿಯೊಬ್ಬರನ್ನು ಗೌರವಿಸುವ ಮನೋಭಾವ ಬೆಳೆಯುತ್ತದೆ. ಸ್ವತಃ ಶ್ರೀಕೃಷ್ಣ ಸುಧಾಮನ ಪಾದ ಸ್ಪರ್ಶ ಮಾಡಿದ್ದ. ಪಾದವನ್ನು ತೊಳೆದಿದ್ದ. ಸುಖ, ಸಮೃದ್ಧಿಗೆ ನವರಾತ್ರಿಯಲ್ಲಿ ಕನ್ಯೆಯರ ಪಾದ ತೊಳೆಯುತ್ತೇವೆ. ಹಾಗೆ ತಂದೆ-ತಾಯಿ, ಹಿರಿಯರ ಪಾದ ತೊಳೆದು ಆಶೀರ್ವಾದ ಪಡೆಯುವುದು ಸೌಭಾಗ್ಯದ ಕೆಲಸ.