ದೇಹತೂಕ ಹೆಚ್ಚಿದಂತೆ ಹಿಮ್ಮಡಿ ನೋವು ಅಧಿಕಗೊಳ್ಳುವುದು ಸಾಮಾನ್ಯ. ಅದಲ್ಲದ ಹೊರತಾಗಿಯೂ ನಿಮಗೆ ಹಿಮ್ಮಡಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಹೀಗೆ ಮಾಡಿ.
ಮಳಿಗೆಗಳಲ್ಲಿ ಸಿಗುವ ಎಪ್ಸಮ್ ಉಪ್ಪನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ. ಅದರಲ್ಲಿ ನಿಮ್ಮ ಕಾಲನ್ನಿಟ್ಟು 20 ನಿಮಿಷ ಕುಳಿತುಕೊಳ್ಳಿ. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಹೀಗೆ ಮಾಡುವುದರಿಂದ ಹಿಮ್ಮಡಿ ನೋವಿನ ಸಮಸ್ಯೆ ಬಹುಪಾಲು ಕಡಿಮೆಯಾಗುತ್ತದೆ.
ನೀರಿಗೆ ಆಪಲ್ ಸೈಡ್ ವಿನೆಗರ್ ಸೇರಿಸಿ ಬಿಸಿ ಮಾಡಿ. ಇದಕ್ಕೆ ಬಟ್ಟೆ ಅದ್ದಿ ನೋವಿರುವ ಕಡೆಗೆ ಶಾಖ ನೀಡಿ. ಹದಿನೈದು ನಿಮಿಷ ಬಿಡದೆ ಮಾಡುವುದರಿಂದ ನಿಮ್ಮ ಕಾಲು ನೋವು ದೂರವಾಗುತ್ತದೆ.
ಐಸ್ ಗೂ ನೋವು ನಿವಾರಕ ಗುಣವಿದೆ. ಇದನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಟವೆಲ್ ನಲ್ಲಿ ಸುತ್ತಿ ನೋವಿರುವ ಜಾಗಕ್ಕೆ ಮಸಾಜ್ ಮಾಡುತ್ತಾ ಬನ್ನಿ, ಇದರಿಂದಲೂ ಹಿಮ್ಮಡಿ ನೋವು ಕಡಿಮೆಯಾಗುತ್ತದೆ. ಫ್ರಿಜ್ ನಲ್ಲಿಟ್ಟ ನೀರಿನ ಬಾಟಲ್ ನಿಂದಲೂ ಹೀಗೆ ಮಾಡಿಕೊಳ್ಳಬಹುದು. ಹಾಲಿಗೆ ಚಿಟಿಕೆ ಅರಶಿನ ಬೆರೆಸಿ ನಿತ್ಯ ಕುಡಿಯುವ ಮೂಲಕವೂ ಈ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.