ಕ್ರಿಸ್ಮಸ್ ಹಾಗೂ ಹೊಸವರ್ಷದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲರೂ ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಪ್ರವಾಸ ಹೋಗ್ತಾರೆ. ಚಳಿಗಾಲದಲ್ಲಿ ಗಿರಿಧಾಮಗಳನ್ನು ವೀಕ್ಷಿಸುವುದು ಮನಸ್ಸಿಗೆ ಮುದ ನೀಡುತ್ತದೆ. ಈ ಬಾರಿ ನೀವು ಶಿಮ್ಲಾ, ಮನಾಲಿ ಮತ್ತು ಮಸ್ಸೂರಿ ಹೊರತುಪಡಿಸಿ ಬೇರೆ ಯಾವುದಾದರೂ ಗಿರಿಧಾಮವನ್ನು ಕಣ್ತುಂಬುಕೊಳ್ಳಲು ಬಯಸಿದ್ರೆ ಗುಜರಾತ್ ನಿಮಗೆ ಬೆಸ್ಟ್ ಪ್ಲೇಸ್.
ವಿಶೇಷವಾಗಿ ಗುಜರಾತ್‌ನ ಈ ಗಿರಿಧಾಮ ನಿಸರ್ಗದ ಕಣಿವೆಗಳಲ್ಲಿ ಅಗಾಧವಾದ ಸೌಂದರ್ಯವನ್ನು ಹೊದ್ದು ನಿಂತಿದೆ. ಇಲ್ಲಿರುವ ಪರ್ವತಗಳು, ಹಚ್ಚ ಹಸಿರಿನ ಕಾಡು, ಜಲಪಾತಗಳು ಮತ್ತು ಸುಂದರವಾದ ಕಣಿವೆಗಳು ಕಣ್ಣಿಗೆ ಹಬ್ಬ ಉಂಟುಮಾಡುತ್ತವೆ. ಈ ಚಳಿಗಾಲದಲ್ಲಿ ಕಡಿಮೆ ಬಜೆಟ್‌ನಲ್ಲಿ ಸುಂದರ ಗಿರಿಧಾಮ ನೋಡಬೇಕಂದ್ರೆ ಇಲ್ಲಿಗೊಮ್ಮೆ ಭೇಟಿ ನೀಡಿ. ಗುಜರಾತ್‌ನ ಸಪುತಾರ ಕುಟುಂಬದೊಂದಿಗೆ ಸ್ಮರಣೀಯ ಸಮಯವನ್ನು ಕಳೆಯಲು ಉತ್ತಮ ತಾಣ. ಸಪುತಾರಾ ಗಿರಿಧಾಮದಲ್ಲಿರುವ ಪ್ರಸಿದ್ಧ ಸಪ್ತಶೃಂಗಿ ದೇವಿ ದೇವಸ್ಥಾನಕ್ಕೂ ಭೇಟಿ ನೀಡಬಹುದು.
ಈ ದೇವಾಲಯವು ಏಳು ಶಿಖರಗಳಿಂದ ಆವೃತವಾಗಿದೆ. ಇಲ್ಲಿ ದೇವಿಯೇ ಪರ್ವತದ ಮುಖದಲ್ಲಿರುವ ಬಂಡೆಯ ಮೇಲೆ ಕಾಣಿಸಿಕೊಂಡಿದ್ದಾಳೆ ಎಂದು ಹೇಳಲಾಗುತ್ತದೆ. ಇಲ್ಲಿ 10 ಅಡಿ ಎತ್ತರದ ಮಾತೆಯ ಪ್ರತಿಮೆ ಇದೆ.ಈ ಗಿರಿಧಾಮ ಬಹಳ ಸುಂದರವಾಗಿದೆ. ಭಾರತದ ಮೂಲೆ ಮೂಲೆಯಿಂದ ಪ್ರವಾಸಿಗರು ಬರುತ್ತಾರೆ. ಸಪುತಾರಾ ಗಿರಿಧಾಮವು ಡ್ಯಾಂಗ್ ಜಿಲ್ಲೆಯಲ್ಲಿದೆ. ಸಾಹಸವನ್ನು ಇಷ್ಟಪಡುವವರು ಒಮ್ಮೆ ಇಲ್ಲಿಗೆ ಭೇಟಿ ನೀಡಬೇಕು. ಸಪುತಾರಾ ಗಿರಿಧಾಮ ದೆಹಲಿಯಿಂದ ಸುಮಾರು 1290 ಕಿ.ಮೀ ದೂರದಲ್ಲಿದೆ. ನೀವು ಸಪುತಾರಾಗೆ ರೈಲು ಮತ್ತು ಬಸ್ ಸೌಲಭ್ಯವನ್ನು ಸಹ ಪಡೆಯಬಹುದು.
ಹಚ್ಚ ಹಸಿರಿನ ಕಾಡುಗಳು, ಪರ್ವತಗಳು, ಜಲಪಾತಗಳು ಮತ್ತು ಕಣಿವೆಗಳು ಈ ಗಿರಿಧಾಮದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಗಿರಿಧಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿ ಸಪುತಾರಾ ಸರೋವರವಿದೆ. ಈ ಸರೋವರವು ನೈಸರ್ಗಿಕವಲ್ಲ, ಮಾನವ ನಿರ್ಮಿತವಾಗಿದೆ. ಇಲ್ಲಿ ದೋಣಿ ವಿಹಾರವನ್ನು ಆನಂದಿಸಬಹುದು. ಈ ಸ್ಥಳವು ಜನಪ್ರಿಯ ಪಿಕ್ನಿಕ್ ತಾಣವಾಗಿ ಪ್ರಸಿದ್ಧವಾಗಿದೆ.
ಇಲ್ಲಿ ಉದ್ಯಾನವನವೂ ಇದೆ. ಸ್ಥಳೀಯ ಮಾರುಕಟ್ಟೆಯು ಅನೇಕ ಆಹಾರ ವಲಯಗಳು, ಟೀ ಸ್ಟಾಲ್‌ಗಳು ಮತ್ತು ಸರೋವರದ ದಡದಲ್ಲಿ ಶಾಪಿಂಗ್‌ಗಾಗಿ ಪ್ರಸಿದ್ಧಿ ಪಡೆದಿದೆ. ಗುಜರಾತ್ ತನ್ನ ಕಾಡುಗಳು, ಗಿರ್ ಅರಣ್ಯ, ಸಮುದ್ರ ತೀರಗಳು, ಧಾರ್ಮಿಕ ಸ್ಥಳಗಳು, ಸ್ವಾತಂತ್ರ್ಯದ ಪ್ರತಿಮೆ ಹೊಂದಿರುವ ಐತಿಹಾಸಿಕ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಗುಜರಾತ್‌ನ ಸೌಂದರ್ಯಕ್ಕೆ ಕಳಸವಿಟ್ಟಂತಿದೆ ಈ ಗಿರಿಧಾಮ.