ಜಮ್ಮು ಮತ್ತು ಕಾಶ್ಮೀರದ ತಂಗ್ದಾರ್ ಚೌಕಿಬಲ್ ಹೆದ್ದಾರಿಯಲ್ಲಿ ಅವಳಿ ಹಿಮಕುಸಿತದಲ್ಲಿ ಸಿಲುಕಿದ್ದ 14 ಮಂದಿ ನಾಗರೀಕರನ್ನು ರಕ್ಷಿಸುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ.
ಇಂದು ಬೆಳಗ್ಗೆ ಹಿಮಕುಸಿತ ಸಂಭವಿಸಿದ್ದರಿಂದ ತಂಗಧರ್ ಚೌಕಿಬಲ್ ರಸ್ತೆಗಳು ಬ್ಲಾಕ್ ಆದವು. ಈ ಹಿಮಕುಸಿತದಲ್ಲಿ ಒಂದು ಮಗು ಸೇರಿದಂತೆ 14 ಮಂದಿ ಸಿಲುಕಿಕೊಂಡರು. ಇವರನ್ನು ರಕ್ಷಿಸಿದ ಭಾರತೀಯ ಯೋಧರು ಕೂಡಲೇ ಅವರನ್ನು ಆರ್ಮಿ ಕ್ಯಾಂಪ್ಗೆ ಕಳುಹಿಸಿದ್ದಾರೆ. ಇಲ್ಲಿ ಇವರಿಗೆ ಆಹಾರ ಹಾಗೂ ಶಾಖವನ್ನು ನೀಡಲಾಗಿದೆ.
ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಪ್ರಯಾಣಿಕರಿಂದ ತುಂಬಿರುವ ವಾಹನಗಳ ಬಗ್ಗೆ ಮಾಹಿತಿ ಪಡೆದ ನಂತರ GREF ಜೊತೆಗೆ ಕ್ಯಾಪ್ಟನ್ ಕುಲ್ಜೋತ್ ಸಿಂಗ್ ಅವರ ಮುಂದಾಳತ್ವದಲ್ಲಿ ನೀಲಂ ಕಂಪನಿಯ ಆಪರೇಟಿಂಗ್ ಬೇಸ್‌ನಿಂದ ಸೇನೆಯ ಹಿಮಪಾತ ರಕ್ಷಣಾ ತಂಡವು ತಕ್ಷಣವೇ ಕಾರ್ಯಪ್ರವೃತ್ತವಾಗಿದೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.