ಮಾಸ್ಕೋ: ಬಹುತೇಕರು ಪ್ರಾಣಿಗಳ ಮುದ್ದಾದ ವಿಡಿಯೋಗಳನ್ನು ಇಷ್ಟಪಡುತ್ತಾರೆ. ನಾಯಿಮರಿಗಳು ಆಟವಾಡುವ ಮುದ್ದಾದ ವಿಡಿಯೋಗಳು, ಬೆಕ್ಕಿನ ಮರಿಗಳು ಮತ್ತು ಆನೆಗಳದ್ದಂತೂ ಇನ್ನೂ ಮುದ್ದಾಗಿರುತ್ತವೆ.
ದಢೂತಿ ಆದ್ರು ತುಂಬಾ ಮುಗ್ಧತೆ ಹೊಂದಿರುವ ಪ್ರಾಣಿ ಅಂದ್ರೆ ಅದು ಆನೆ. ಅವುಗಳ ಮುದ್ದಾದ ಆಟ, ತುಂಟಾಟ ಎಲ್ಲವೂ ನಮ್ಮ ಹೃದಯವನ್ನು ಕರಗಿಸುತ್ತವೆ. ಅಂತಹ ಒಂದು ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಆನೆಗಳ ಗುಂಪು ಹಿಮದಲ್ಲಿ ಜಾರುತ್ತಾ, ಮೋಜು ಮಾಡಿವೆ. ರಷ್ಯಾದ ಮಾಸ್ಕೋ ಮೃಗಾಲಯದಲ್ಲಿ ಈ ಮುದ್ದಾದ ಕ್ಷಣವನ್ನು ಸೆರೆಹಿಡಿಯಲಾಗಿದೆ. ಆನೆಗಳು ತಮ್ಮ ಸೊಂಡಿಲಿನಿಂದ ಹಿಮವನ್ನು ಸುತ್ತಲೂ ಎಸೆಯುತ್ತಿದ್ದರೆ, ಮರಿ ಆನೆಯೊಂದು ಕೆಸರಿನಲ್ಲಿ ಉರುಳಿದಂತೆ ಹಿಮದ ಮೇಲೆ ಜಾರಿದೆ. ಆನೆಗಳ ಪಡೆ ಹಿಮದಲ್ಲಿ ಆಟವಾಡುತ್ತಾ, ಎಂಜಾಯ್ ಮಾಡುತ್ತಿರುವುದನ್ನು ನೋಡಿದ್ರೆ ಖಂಡಿತಾ ನಿಮಗೂ ಮಂಜಿನಲ್ಲಿ ಆಟವಾಡುವ ಆಸೆಯುಂಟಾಗಬಹುದು.
ಅಪರೂಪದ ನಗುವಿನ ಕಾಯಿಲೆಯಿಂದ ಬಳಲುತ್ತಿರುವ 3 ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಇದೀಗ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮೊಗದಲ್ಲಿ ನಗು ತಂದಿದೆ. ಈ ವಿಡಿಯೋಗೆ ನೆಟ್ಟಿಗರು ಹೃದಯದ ಎಮೋಜಿಗಳೊಂದಿಗೆ ಆನೆಗಳ ಮೇಲೆ ಪ್ರೀತಿಯನ್ನು ಸುರಿದಿದ್ದಾರೆ. ಇತರರು ಅವುಗಳ ಸೆರೆವಾಸಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ರಷ್ಯಾದಲ್ಲಿ ಕೇವಲ 11 ಆನೆಗಳಿವೆ, ಅವುಗಳಲ್ಲಿ ನಾಲ್ಕು ಮಾಸ್ಕೋ ಮೃಗಾಲಯದಲ್ಲಿ ವಾಸಿಸುತ್ತವೆ.