ಗೆಣಸು ಎಂದಾಕ್ಷಣ ಗ್ಯಾಸ್ ಎಂದು ಓಡಿ ಹೋಗದಿರಿ. ಅದರಿಂದ ಸಿಗುವ ಆರೋಗ್ಯದ ಲಾಭಗಳ ಬಗ್ಗೆಯೂ ತಿಳಿಯಿರಿ.
ಇದರಲ್ಲಿ ದೇಹಕ್ಕೆ ಬೇಕಾದ ಬಿ6, ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, ಮೆಗ್ನಿಶಿಯಂ ಮೊದಲಾದ ಅಂಶಗಳಿವೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ನಾರಿನಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಸಹ ಇದ್ದು ಹಲವು ಆರೋಗ್ಯದ ತೊಂದರೆಗಳಿಂದ ರಕ್ಷಣೆ ನೀಡುತ್ತದೆ.
ಹಿತಮಿತವಾಗಿ ಗೆಣಸನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಜೀರ್ಣಶಕ್ತಿ ಹೆಚ್ಚುತ್ತದೆ.
ಶೀತ ಮತ್ತು ಜ್ವರದ ಸೋಂಕು ಹರಡುವುದನ್ನು ತಡೆಗಟ್ಟುತ್ತದೆ. ಅಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮೂಳೆ ಮತ್ತು ಹಲ್ಲಿನ ರಚನೆ, ಜೀರ್ಣಕ್ರಿಯೆ ಮತ್ತು ರಕ್ತ ಕಣಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುವ ಇದು ಮುಪ್ಪು ಬರುವುದನ್ನು ಮುಂದೂಡುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ.