ಕರ್ನಾಟಕದ ಹಿಜಾಬ್ ವಿವಾದ ಭಾರತದ ವಿವಿಧ ರಾಜ್ಯಗಳನ್ನು ತಲುಪುತ್ತಿದೆ. ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ನಾಯಕಿ ರುಬಿನಾ ಖಾನಮ್, ಹಿಜಾಬ್ ಅನ್ನು ಸ್ಪರ್ಶಿಸಲು ಪ್ರಯತ್ನಿಸುವವರ ಕೈಗಳನ್ನು ಕತ್ತರಿಸಲಾಗುವುದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಶನಿವಾರ ರುಬಿನಾ ಅವರು ಈ ಹೇಳಿಕೆ ನೀಡಿದ್ದಾರೆ. ಶುಕ್ರವಾರ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಹಿಳಾ ವಿದ್ಯಾರ್ಥಿಗಳು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
BIG NEWS: ‘ಐಪಿಎಲ್’ ಮೆಗಾ ಹರಾಜು; ಶಿಖರ್ ಧವನ್ ಗೆ ಬಂಪರ್, ಸುರೇಶ್ ರೈನಾಗೆ ನಿರಾಸೆ
ನೀವು ಭಾರತದ ಹೆಣ್ಣುಮಕ್ಕಳು ಮತ್ತು ಸಹೋದರಿಯರ ಗೌರವದೊಂದಿಗೆ ಆಟವಾಡಲು ಪ್ರಯತ್ನಿಸಿದರೆ, ಅವರು ಝಾನ್ಸಿ ರಾಣಿ ಮತ್ತು ರಜಿಯಾ ಸುಲ್ತಾನಾರಂತೆ ಮರು ಉತ್ತರ ನೀಡುತ್ತಾರೆ. ಹಿಜಾಬ್ ಗಳನ್ನು ಮುಟ್ಟಿದವರ ಕೈಗಳನ್ನು ಕತ್ತರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿರುವ ಮುಸ್ಲಿಂ ನಾಯಕಿ, ಭಾರೀ ವಿವಾದ ಸೃಷ್ಟಿಸಿದ್ದಾರೆ.
ಭಾರತವು ವೈವಿಧ್ಯತೆಯ ದೇಶವಾಗಿದೆ ಮತ್ತು ಒಬ್ಬ ವ್ಯಕ್ತಿ ಹಣೆಯ ಮೇಲೆ ತಿಲಕವಿದೆಯೇ, ಪೇಟ ಅಥವಾ ಹಿಜಾಬ್ ಧರಿಸಿದ್ದಾನೆಯೇ ಎಂಬುದು ಮುಖ್ಯವಲ್ಲ. ಘುಂಘಾಟ್ ಮತ್ತು ಹಿಜಾಬ್ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗಗಳು. ಈ ವಿಷಯದಲ್ಲಿ ರಾಜಕೀಯ ಮಾಡುವುದು ಅಥವಾ ವಿವಾದ ಸೃಷ್ಟಿಸುವುದು ಸರಿಯಲ್ಲ. ಒಂದು ರಾಜ್ಯದಲ್ಲಿ ಯಾವುದೇ ಪಕ್ಷ ಸರ್ಕಾರ ನಡೆಸಬಹುದು, ಆದರೆ ಮಹಿಳೆಯರನ್ನು ದುರ್ಬಲ ಎಂದು ಪರಿಗಣಿಸುವ ತಪ್ಪನ್ನು ಯಾರೂ ಮಾಡಬಾರದು ಎಂದು ರುಬಿನಾ ಖಾನಮ್ ಹೇಳಿದ್ದಾರೆ.