alex Certify ಹಿಜಾಬ್ ಸಮರ್ಥಿಸುವ ಧಾರ್ಮಿಕ ಮುಖಂಡರನ್ನು ಖಂಡಿಸಿದ ಟ್ವಿಂಕಲ್ ಖನ್ನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಜಾಬ್ ಸಮರ್ಥಿಸುವ ಧಾರ್ಮಿಕ ಮುಖಂಡರನ್ನು ಖಂಡಿಸಿದ ಟ್ವಿಂಕಲ್ ಖನ್ನಾ

ನಟಿ, ಲೇಖಕಿ ಟ್ವಿಂಕಲ್ ಖನ್ನಾ ಸಾಮಾಜಿಕ ಸಮಸ್ಯೆಗಳು ಮತ್ತು ಅನ್ಯಾಯಗಳ ವಿರುದ್ಧ ಲೇಖನಗಳನ್ನು ಬರೆಯುತ್ತಾರೆ. ಇದೀಗ ಟ್ವಿಂಕಲ್ ಖನ್ನಾ ಪ್ರಸ್ತುತ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರು ತಾವು ಧರಿಸಲು ಯಾವುದನ್ನು ಇಷ್ಟಪಡುತ್ತಾರೋ ಅಂತಹ ಉಡುಪನ್ನು ಧರಿಸುವ ಸ್ವಾತಂತ್ರ್ಯ ಅವರಿಗಿದೆ ಎಂದು ಹೇಳಿದ್ದಾರೆ.

ಬುರ್ಖಾಗಳು ಮತ್ತು ಘುಂಗಾಟ್‌ಗಳಂತೆಯೇ ಹಿಜಾಬ್‌ ಧಾರ್ಮಿಕ ಮತ್ತು ಸಾಂಸ್ಕೃತಿಕ ರಚನೆಗಳನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ. ತಮ್ಮ ಅಂಕಣದಲ್ಲಿ ಇದೇ ಕುರಿತು ಮಾತನಾಡಿರುವ ಅವರು, ಕೆಲವು ಧಾರ್ಮಿಕ ಮುಖಂಡರು ಹಿಜಾಬ್ ಬಗ್ಗೆ ಮಾತನಾಡುವುದನ್ನು ಕೇಳಿದ್ರೆ ಮತ್ತು ಅದನ್ನು ಸಮರ್ಥಿಸಿಕೊಳ್ಳುವುದು ಕಂಡರೆ ನಗು ಬರುತ್ತದೆ ಎಂದು ಅವರು ಟೀಕಿಸಿದ್ದಾರೆ.

ಹಿಜಾಬ್ ಪುರುಷರನ್ನು ಹೇಗೆ ಪ್ರಲೋಭನೆಗೆ ಒಳಪಡಿಸುವುದನ್ನು ತಡೆಯುತ್ತದೆ ಎಂಬುದರ ಕುರಿತು ಕೆಲವು ಧಾರ್ಮಿಕ ಮುಖಂಡರು ಮಾತನಾಡುವುದನ್ನು ಒಪ್ಪಿಕೊಳ್ಳಲೇಬೇಕು. ಈ ಎಲ್ಲಾ ಭಾಯಿ ಸಾಬ್‌ಗಳು ಕುಳಿತುಕೊಂಡು ಮಾತನಾಡಲು ಅವಕಾಶ ನೀಡಬೇಕು ಎಂದಿದ್ದಾರೆ.

ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಟ್ವಿಂಕಲ್ ಖನ್ನಾ ಜೀವನ ಮತ್ತು ರಮ್ಮಿ ಒಂದೇ ನಿಯಮಗಳನ್ನು ಅನುಸರಿಸಿ, ನಿಮ್ಮ ಕೈಯಲ್ಲಿರುವ ಜೋಕರ್ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿದಕ್ಕಿಂತ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

— Twinkle Khanna (@mrsfunnybones) March 6, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...