
ಮೈಸೂರು: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಹಿಜಾಬ್ ಧರಿಸಬೇಕೆಂದರೆ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಇಂದು ಕಾಲೇಜಿಗೆ ಹಿಜಾಬ್ ಧರಿಸಿ ಬರುತ್ತೇವೆ ಎಂದು ಹೇಳುವವರು ನಾಳೆ ಶಾಲೆಯಲ್ಲಿ ಮಸೀದಿ ಕಟ್ಟಲು ಅವಕಾಶ ಕೊಡಿ ಎನ್ನುತ್ತಾರೆ. ತಾಲಿಬಾನ್ ಸಂಸ್ಕೃತಿಗೆ ಅವಕಾಶ ಕೊಡಲ್ಲ ಎಂದು ವಾಗ್ದಾಳಿ ನಡೆಸಿದರು.
ನ್ಯೂಯಾರ್ಕ್ನಲ್ಲಿ ಪತ್ತೆಯಾದ ಅಪರೂಪದ ಚಿನ್ನದ ಘನದ ಬಗ್ಗೆ ಇಲ್ಲಿದೆ ಮಾಹಿತಿ
ದೇಶ ಹಾಗೂ ರಾಜ್ಯದ ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆ. ಹಿಜಾಬ್ ವಿವಾದದ ಹಿಂದೆ ದೇಶದ್ರೋಹಿಗಳ ಕೈವಾಡವಿದೆ. ಹಿಜಾಬ್ ಬೇಕು ಎನ್ನುವವರು, ಸರ್ಕಾರಿ ಶಾಲಾ-ಕಾಲೇಜಿನಲ್ಲಿ ಉರ್ದು ಭಾಷೆ ಬೇಕು ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎಂದರು.
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಯತ್ನಾಳ್, ಸಿದ್ದರಾಮಯ್ಯನವರು ಹಿಂದೂನಾ ಅಥವಾ ಮುಸ್ಲಿಂ ಆಗಿದ್ದಾರಾ ? ಪ್ರತಿಬಾರಿ ಸಿದ್ದರಾಮಯ್ಯ ಅವರದ್ದು ಸಾಬ್ರನ್ನ ಓಲೈಸುವ ಗುಣವಾಗಿದೆ. ಮುಸ್ಲಿಂರನ್ನು ತಲೆ ಮೇಲೆ ಹೊತ್ತು ಮೆರೆಯುತ್ತಿದ್ದಾರೆ. ಇದನ್ನು ಜಾತ್ಯಾತೀತ ಎಂದು ಹೇಳಲ್ಲ. ಜಾತ್ಯಾತೀತತೆ ಎನ್ನುವವರು ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣಬೇಕು ಅಂದ ಮೇಲೆ ಸಿದ್ದರಾಮಯ್ಯ ಹಿಜಾಬ್ ಪರವಾಗಿ ಮಾತನಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.