ಇಂದು ಕರ್ವಾ ಚೌತ್ ದಿನವಾಗಿದ್ದು, ಇದನ್ನು ಉತ್ತರ ಭಾರತದಲ್ಲಿ ಪ್ರಮುಖವಾಗಿ ಆಚರಿಸಲಾಗುತ್ತದೆ. ಉಪವಾಸ ಆಚರಣೆ ಮಾಡುವ ಮಹಿಳೆಯರು, ಹಬ್ಬದ ಆಚರಣೆಗಾಗಿ ತಮ್ಮ ಕೈಗೆ ಮೆಹಂದಿ ಹಾಕಿಸಿಕೊಳ್ಳುವುದು ಸಂಪ್ರದಾಯವಾಗಿದೆ.
ಸಾಮಾನ್ಯವಾಗಿ ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ಮೆಹಂದಿ ಹಾಕುತ್ತಿದ್ದು, ಆದರೆ ಉತ್ತರಪ್ರದೇಶದ ಕೋಮು ಸೂಕ್ಷ್ಮ ಪ್ರದೇಶ ಮಜಾಫರ್ ನಗರದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಮೆಹಂದಿ ಹಾಕದಂತೆ ಮುಸ್ಲಿಂ ಯುವಕರಿಗೆ ವಿಶ್ವ ಹಿಂದೂ ಪರಿಷತ್ ಸೇರಿದಂತೆ ಇತರೆ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಮುಜಾಫರ್ ನಗರ ಜಿಲ್ಲೆಯಲ್ಲಿ 13 ಮೆಹಂದಿ ಹಾಕುವ ಕೇಂದ್ರಗಳನ್ನು ತೆರೆಯಲಾಗಿದ್ದು, ಇಲ್ಲಿ ಹಿಂದೂಗಳೇ ಮೆಹಂದಿ ಹಾಕಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ಹೇಳಿದ್ದಾರೆ. ಮುಸ್ಲಿಂ ಯುವಕರು ಮೆಹಂದಿ ಹಾಕುವಾಗ ಹಿಂದೂ ಹೆಣ್ಣು ಮಕ್ಕಳಿಗೆ ಆಮಿಷ ಒಡ್ಡಿ ಲವ್ ಜಿಹಾದ್ ಹಾಗೂ ಮತಾಂತರಕ್ಕೆ ಪ್ರೇರೇಪಿಸುತ್ತಾರೆ ಎಂಬುದು ಹಿಂದೂ ಸಂಘಟನೆಗಳ ಆರೋಪವಾಗಿದೆ.