ಭಾರತೀಯ ವಿವಾಹ ಸಂಪ್ರದಾಯಗಳಿಗೆ ವಿದೇಶಿಯರು ಮಾರುಹೋಗುವುದು ಹೊಸ ವಿಷಯವೇನಲ್ಲ. ಈ ಹಿಂದೆಯೂ ವಿದೇಶಿ ಮೂಲದ ಹಲವರು ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಸಹ ಅಂತಹ ಒಂದು ವಿಶೇಷ ವಿವಾಹದ ಕಥೆ.
ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಸಂದರ್ಭದಲ್ಲಿ ರಷ್ಯಾದ ಯುವಕ, ಉಕ್ರೇನ್ ಯುವತಿಯನ್ನು ವಿವಾಹವಾಗಿದ್ದಾನೆ. ಅದು ಕೂಡ ಈ ಜೋಡಿ ಹಿಂದೂ ಸಂಪ್ರದಾಯದಂತೆ ಭಾರತದಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿರುವುದು ವಿಶೇಷ.
ಹೌದು, ಇಸ್ರೇಲ್ ನಲ್ಲಿ ಕೆಲಸ ಮಾಡುತ್ತಿರುವ ರಷ್ಯಾ ಮೂಲದ ಸರ್ಗೆ ನೊವೊಕಿವಾ ತಮ್ಮ ಬಹುಕಾಲದ ಗೆಳತಿ ಉಕ್ರೇನ್ ಮೂಲದ ಎಲಾನ್ ಬ್ರಾಮೊಕಾ ಅವರನ್ನು ಹಿಮಾಚಲ ಪ್ರದೇಶದ ಧರ್ಮಶಾಲಾದ ಬಳಿ ಇರುವ ಖರೋಟದ ದಿವ್ಯ ಆಶ್ರಮದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.