ತಮಿಳುನಾಡಿನ ಮೀನಾಕ್ಷಿಪುರಂ ಮುತ್ತುಮರಿ ಅಮ್ಮನ್ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿರುವ ಹಿಂದೂ ಭಕ್ತರಿಗೆ ಮುಸ್ಲಿಂ ಮಹಾನುಭಾವರೊಬ್ಬರು ಸಹಾಯ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ.
ಮಾಸಿ ಪಂಗುನಿ ಹಬ್ಬದ ಪ್ರಯುಕ್ತ ಹಿಂದೂ ಮಹಿಳೆಯರು ತಮ್ಮ ತಲೆಯ ಮೇಲೆ ಹಾಲಿನ ಪಾತ್ರೆಯನ್ನು ಹೊತ್ತು ದೇವಸ್ಥಾನದ ಕಡೆ ಸಾಗುತ್ತಿದ್ದರೆ ರಸ್ತೆಯಲ್ಲಿ ಸೂರ್ಯನ ಶಾಖದಿಂದಾಗಿ ಮಹಿಳೆಯರಿಗೆ ನಡೆದುಕೊಂಡು ಹೋಗಲು ಕಷ್ಟವಾಗುತ್ತದೆ ಎಂಬುದನ್ನು ಅರಿತ ಬಜಾರ್ ಮಸೀದಿಯ ಮುಸ್ಲಿಂ ವ್ಯಕ್ತಿಯೊಬ್ಬರು ರಸ್ತೆಗೆಲ್ಲ ನೀರು ಸುರಿದು ಮಾನವೀಯತೆ ಮೆರೆದಿದ್ದಾರೆ.
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ತಿರುಚ್ಚಿ ಜಿಲ್ಲೆಯ ವರಸಿತಿ ಗಣೇಶ ದೇವಸ್ಥಾನದಿಂದ ರಾಜ ರಾಜೇಶ್ವರಿ ಅಮ್ಮನ್ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರಿಗೆ ಮುಸ್ಲಿಂ ಮಹಾನುಭಾವರು ಮಜ್ಜಿಗೆ ನೀಡುವ ಮೂಲಕ ಕೋಮು ಸೌರ್ಹಾದತೆ ಮರೆದಿದ್ದಾರೆ.