ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ (ಎನ್.ಸಿ.ಆರ್.ಬಿ.) ಬಿಡುಗಡೆ ಮಾಡಿರುವ ವರದಿ ಒಂದರಲ್ಲಿ ದೇಶದ ಜೈಲುಗಳಲ್ಲಿರುವ ಖೈದಿಗಳ ಸಂಖ್ಯೆ ಕುರಿತಂತೆ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ.
ಸಜಾ ಖೈದಿಗಳು, ವಿಚಾರಣಾ ಖೈದಿಗಳು, ವಶಕ್ಕೆ ಪಡೆಯಲಾದವರು ಸೇರಿದಂತೆ ಎಲ್ಲ ರೀತಿಯ ಮುಸ್ಲಿಂ ಖೈದಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದರೆ, ಹಿಂದೂ ಖೈದಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಅದೇ ರೀತಿ ಕ್ರಿಶ್ಚಿಯನ್ ಖೈದಿಗಳ ಸಂಖ್ಯೆಯಲ್ಲೂ ಇಳಿಕೆಯಾಗಿದ್ದು, ಆದರೆ ಸಿಖ್ ಖೈದಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.
2020ರಲ್ಲಿ ದೇಶದಾದ್ಯಂತ ಜೈಲುಗಳಲ್ಲಿರುವ ಹಿಂದೂ ಖೈದಿಗಳ ಪ್ರಮಾಣ ಶೇ.72.8 ರಷ್ಟಿದ್ದು, 2021 ರಲ್ಲಿ ಇದು ಶೇ.73.6 ಕ್ಕೆ ಏರಿಕೆಯಾಗಿದೆ. ಆದರೆ ಇದೇ ಅವಧಿಯಲ್ಲಿ ಶೇ.20.2ರಷ್ಟು ಇದ್ದ ಮುಸ್ಲಿಂ ಖೈದಿಗಳ ಪ್ರಮಾಣ ಶೇಕಡಾ 18.7 ಕ್ಕೆ ಇಳಿಕೆಯಾಗಿದೆ.
ಇನ್ನು ಈ ಅವಧಿಯಲ್ಲಿ ಶೇಕಡಾ 2.6 ರಷ್ಟು ಇದ್ದ ಕ್ರಿಶ್ಚಿಯನ್ ಕೈದಿಗಳ ಪ್ರಮಾಣ ಶೇಕಡ 2.5ಕ್ಕೆ ಇಳಿಕೆಯಾಗಿದ್ದರೆ, ಸಿಖ್ ಕೈದಿಗಳ ಪ್ರಮಾಣ ಶೇಕಡಾ 3.4 ರಿಂದ ಶೇಕಡ 4.2ಕ್ಕೆ ಏರಿಕೆಯಾಗಿದೆ.
ಇನ್ನು ದೇಶದ ಜನಸಂಖ್ಯೆಯಲ್ಲಿ 2011ರ ಜನಗಣತಿ ಪ್ರಕಾರ ಹಿಂದೂಗಳು ಶೇ.79.8ರಷ್ಟು ಇದ್ದು, ಮುಸ್ಲಿಮರು ಶೇಕಡ 14.2 ಹಾಗೂ ಸಿಕ್ಕರು ಶೇ.1.7 ರಷ್ಟು ಇದ್ದಾರೆ.