ರಾಜ್ಯದಲ್ಲಿ ಯಾದಗಿರಿ ಜಿಲ್ಲೆಯನ್ನು ಅತೀ ಹಿಂದುಳಿದ ಜಿಲ್ಲೆ ಎಂದೇ ಕರೆಯಲಾಗುತ್ತದೆ. ಅಲ್ಲದೇ, ಈ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿದಿತ್ತು. ಹೀಗಾಗಿಯೇ ಈ ಹಣೆ ಪಟ್ಟಿ ಬಂದಿತ್ತು. ಆದರೆ, ಈಗ ಈ ಜಿಲ್ಲೆ ಒಂದೊಂದೇ ಕ್ಷೇತ್ರದಲ್ಲಿ ಮೈಗೊಡವಿಕೊಂಡು ಮೇಲೆ ಬರಲು ಪ್ರಯತ್ನಿಸುತ್ತಿದೆ.
ಈಗ ಮಸ್ತ್ಯ ಲೋಕದಲ್ಲಿ ಕ್ರಾಂತಿಯನ್ನೇ ಯಾದಗಿರಿ ಜಿಲ್ಲೆ ಮಾಡಿದೆ. ಈ ಬಿಸಿಲು ನಾಡಿನಲ್ಲಿ ಭೀಮ ಹಾಗೂ ಕೃಷ್ಣಾ ನದಿ ಹರಿಯುತ್ತವೆ. ಈ ನದಿಗಳಿಂದ ಜನರು ಮೀನು ಉತ್ಪಾನೆ ಮಾಡುತ್ತಾರೆ. ಈಗ ಈ ಉತ್ಪಾದನೆಯಿಂದ ಹಲವರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೇ, ಮೀನು ಉತ್ಪಾದನೆಯಲ್ಲಿ ನಂ. 1 ಸ್ಥಾನವನ್ನು ಕೂಡ ಪಡೆದಿದೆ.
ಇಲ್ಲಿಯ ಜನರು ನದಿಯೊಂದಿಗೆ ಕೆರೆಗಳನ್ನು ಸೃಷ್ಟಿಸಿ ಅವುಗಳಿಂದಲೂ ಮೀನು ಉತ್ಪಾನೆ ಮಾಡುತ್ತಾರೆ. ಕಳೆದ 10 ತಿಂಗಳಲ್ಲಿ ಈ ಜಿಲ್ಲೆಯಲ್ಲಿ ಬರೋಬ್ಬರಿ 7,416 ಟನ್ ಮೀನು ಉತ್ಪಾನೆ ಮಾಡಲಾಗಿದೆ. ಕಾಮನ್ ಕಾರ್ಟ್, ಮುರೆಲ್, ರೋಹಾ, ತಿಲಾಪಿಯಾ, ಕಟ್ಲಾ, ಸೀಗಡಿ ಮೀನು, ಪೆಂಗಾಸಿಯನ್ ಮೀನುಗಳ ಉತ್ಪಾದನೆಯನ್ನು ಮಾಡುತ್ತಾರೆ.
ಜಿಲ್ಲೆಯ ಮೀನುಗಳಿಗೆ ರಾಜ್ಯ ಸೇರಿದಂತೆ ಅನ್ಯ ರಾಜ್ಯಗಳಲ್ಲಿಯೂ ಬೇಡಿಕೆ ಹೆಚ್ಚಿದೆ.