ಮೈಕ್ರೋ ಬ್ಲಾಗಿಂಗ್ ತಾಣವಾದ ಟ್ವಿಟ್ಟರ್‌ನಲ್ಲಿ ಗಾನಾ ಆಪ್ ಅನ್ನು ಬಹಿಷ್ಕರಿಸಿ ಎಂಬ ಪೋಸ್ಟ್ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಗಾನಾ ಆಪ್‌ನಲ್ಲಿ ದ್ವೇಷವನ್ನು ಪೋಷಿಸುವಂತಹ ಹಾಡುಗಳನ್ನು ಹಾಕಲಾಗ್ತಿದೆ ಎಂಬ ಆರೋಪವಿದೆ. ಹಾಗಾಗಿ ಈ ಅಪ್ಲಿಕೇಷನ್ ಅನ್ನೇ ಬಹಿಷ್ಕರಿಸಬೇಕೆಂದು ಟ್ವಿಟ್ಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗುಸ್ತಾಖ್ ಏ ನಬೀ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ ನಾರೇ ಸೇರಿದಂತೆ ದ್ವೇಷವನ್ನು ಬಿತ್ತುವಂಹತ ಅನೇಕ ಹಾಡುಗಳನ್ನು ಗಾನಾ ಪ್ರಸಾರ ಮಾಡ್ತಾ ಇದೆ. ಹಾಗಾಗಿ ಇಂತಹ ಹಾಡುಗಳನ್ನೆಲ್ಲ ಆಪ್‌ನಿಂದ ತೆಗೆದು ಹಾಕುವಂತೆ ಬಳಕೆದಾರರು ಒತ್ತಾಯಿಸಿದ್ದಾರೆ.
ಗಾನಾ ಪ್ರಸಾರ ಮಾಡ್ತಿರೋ ಈ ಹಾಡುಗಳಿಂದ ಅನೇಕ ಹತ್ಯೆಗಳಾಗಿವೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಆರೋಪಿಸಿದ್ದಾರೆ. ಇಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ಹಿಂದುಗಳಿಗೆ ಧಮಕಿ ಹಾಕುತ್ತಿರುವ ಕೆಲವೊಂದು ವಿಡಿಯೋಗಳನ್ನು ಕೂಡ ಡೌನ್ಲೋಡ್ ಮಾಡಿಕೊಳ್ಳಲಾಗ್ತಿದೆ ಅನ್ನೋದು ಬಳಕೆದಾರರ ದೂರು.
ಹಿಂದುಗಳ ವಿರುದ್ಧ ದ್ವೇಷ ಬಿತ್ತುತ್ತಿರುವ ಈ ಅಪ್ಲಿಕೇಶನ್‌ಗಳನ್ನು ಬಂದ್ ಮಾಡಬೇಕೆಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಗಾನಾ ಆಪ್ ಹಿಂದೂ ವಿರೋಧಿ, ಭಾರತ ವಿರೋಧಿ ಮತ್ತು ರಾಷ್ಟ್ರದ ಅಖಂಡತೆಗೆ ಕುತ್ತು ತರುತ್ತಿದೆ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.
ಸರ್ ತನ್ ಸೆ ಜುದಾ ಎಂಬ ಈ ಹಾಡು ಕೇವಲ ಗಾನಾದಲ್ಲಿ ಮಾತ್ರವಲ್ಲ ಎಲ್ಲಾ ಮ್ಯೂಸಿಕ್ ಆಪ್‌ಗಳಲ್ಲೂ ಇದೆ. ಹಾಗಾಗಿ ಇದನ್ನು ತೆಗೆದು ಹಾಕಬೇಕೆಂಬ ಒತ್ತಾಯ ಕೇಳಿ ಬಂದಿದೆ. ಉದಯ್ಪುರದಲ್ಲಿ ಹಿಂದು ಟೇಲರ್ ಕನ್ಹಯ್ಯ ಲಾಲ್ ನನ್ನು ಹತ್ಯೆ ಮಾಡಿದ್ದ ಮಹಮ್ಮದ್ ಗೌಸ್ ಹಾಗೂ ರಿಯಾಜ್ ಅಖ್ತರಿ ತಮ್ಮ ದುಷ್ಕೃತ್ಯದ ಬಳಿಕ ಇದೇ ಹಾಡನ್ನು ಆಲಿಸಿದ್ದರು.