ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ ತಿನ್ನಲು ಸಾಮಾನ್ಯವಾಗಿ ಯಾರೂ ಇಷ್ಟ ಪಡುವುದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದ್ರೆ ಮತ್ತೆ ಕೆಲವರು ಪ್ರಾಣಿಗಳಿಗೆ ನೀಡುತ್ತಾರೆ. ಆದ್ರೆ ಇನ್ನು ಮುಂದೆ ಮಿಕ್ಕ ಅನ್ನವನ್ನು ಕಸಕ್ಕೆ ಹಾಕಬೇಡಿ. ಅದು ಆರೋಗ್ಯದ ಸಂಪತ್ತು ಎಂಬುದನ್ನು ನೆನಪಿಡಿ.
ರಾತ್ರಿ ಅನ್ನ ಮಿಕ್ಕಿದ್ದರೆ, ಅದನ್ನು ಒಂದು ಮಡಿಕೆಯಲ್ಲಿ ಹಾಗೆ ಇಡಿ. ಬೆಳಿಗ್ಗೆ ಅದಕ್ಕೆ ಈರುಳ್ಳಿ ಸೇರಿಸಿ ತಿನ್ನಿರಿ. ಇದು ನಿಮ್ಮ ನೆಚ್ಚಿನ ಉಪಹಾರವಾಗದಿರಬಹುದು. ಆದ್ರೆ ಆರೋಗ್ಯ ವೃದ್ಧಿಗೆ ಈ ಹಳೆಯ ಅನ್ನ ರಾಮಬಾಣ.
ಹಳೆಯ ಅನ್ನ ದೇಹಕ್ಕೆ ತಂಪು. ಪ್ರತಿದಿನ ಈ ಅನ್ನ ಸೇವನೆಯಿಂದ ನಿಮ್ಮ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ದೇಹ ತಂಪಿರುತ್ತದೆ.
ಈ ಅನ್ನದಲ್ಲಿ ಫೈಬರ್ ಅಂಶ ಜಾಸ್ತಿ ಇರುತ್ತದೆ. ಇದು ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
ಹಳೆಯ ಅನ್ನ ನಿಮ್ಮನ್ನು ದಿನ ಪೂರ್ತಿ ಫ್ರೆಶ್ ಆಗಿರಿಸುತ್ತದೆ. ಇದರ ಸೇವನೆಯಿಂದ ದಿನ ಪೂರ್ತಿ ಕೆಲಸ ಮಾಡಲು ಶಕ್ತಿ ಸಿಗುತ್ತದೆ.
ನಿಮಗೆ ಅಲ್ಸರ್ ಸಮಸ್ಯೆ ಇದ್ದರೆ ವಾರದಲ್ಲಿ ಮೂರು ಬಾರಿ ಹಳೆ ಅನ್ನವನ್ನು ಸೇವಿಸಿ.
ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀ ಕುಡಿಯುವ ಹವ್ಯಾಸವಿದ್ದು, ಅದನ್ನು ಬಿಡಬೇಕೆಂದಿದ್ದರೆ ಅನ್ನವನ್ನು ಸೇವಿಸಿ. ಕೆಲವೇ ದಿನಗಳಲ್ಲಿ ಈ ಚಟ ನಿಯಂತ್ರಣಕ್ಕೆ ಬರುತ್ತದೆ.