ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ಅದಾನಿ ಗ್ರೂಪ್ ಕುರಿತಂತೆ ತನ್ನ ವರದಿ ಬಿಡುಗಡೆ ಮಾಡಿದ ಬಳಿಕ ಅದಾನಿ ಗ್ರೂಪಿನ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತವಾಗಿತ್ತು. ಇದರ ಪರಿಣಾಮ ಗೌತಮ್ ಅದಾನಿಯವರ ಸಂಪತ್ತಿನಲ್ಲಿ ತೀವ್ರ ಇಳಿಕೆ ಕಂಡು ವಿಶ್ವ ಸಿರಿವಂತರ ಟಾಪ್ 10 ಪಟ್ಟಿಯಿಂದ ಹೊರಬೀಳಬೇಕಾಯಿತು.
ಇದರ ಜೊತೆಗೆ ಅದಾನಿ ಗ್ರೂಪ್ ನಲ್ಲಿ ಹೂಡಿಕೆ ಮಾಡಿದ್ದ ಭಾರತೀಯ ಜೀವವಿಮಾ ನಿಗಮ ಕೂಡ ನಷ್ಟಕ್ಕೊಳಗಾಗುವಂತೆ ಆಗಿತ್ತು. ಇದೀಗ ಎಲ್ಲ ಎಚ್ಚರಿಕೆಗಳನ್ನು ನಿರ್ಲಕ್ಷಿಸಿರುವ ಎಲ್ಐಸಿ, ಅದಾನಿ ಕಂಪನಿಗಳಲ್ಲಿ ತನ್ನ ಷೇರು ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಲಾಗಿದೆ.
ಜನವರಿ – ಮಾರ್ಚ್ ತ್ರೈಮಾಸಿಕದಲ್ಲಿ ಅದಾನಿ ಎಂಟರ್ಪ್ರೈಸಸ್ ನ 3.5 ಲಕ್ಷ ಷೇರುಗಳನ್ನು ಭಾರತೀಯ ಜೀವ ವಿಮಾ ನಿಗಮ ಖರೀದಿಸಿದ್ದು, ಇದೀಗ ಷೇರಿನ ಪಾಲು ಶೇಕಡ 4.26 ಕ್ಕೆ ಏರಿದಂತಾಗಿದೆ. ಇದರ ಜೊತೆಗೆ ಅದಾನಿ ಟ್ರಾನ್ಸ್ ಮಿಷನ್, ಅದಾನಿ ಗ್ರೀನ್ ಮತ್ತು ಅದಾನಿ ಟೋಟಲ್ ಗ್ಯಾಸ್ ಕಂಪನಿಯಲ್ಲೂ ಎಲ್ಐಸಿ ತನ್ನ ಷೇರುಗಳ ಪ್ರಮಾಣವನ್ನು ಹೆಚ್ಚಿಸಿದೆ ಎಂದು ತಿಳಿದು ಬಂದಿದೆ.