ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಜಯ ಸಾಧಿಸಿದ ನಂತರ ಭಗವಂತ್ ಮಾನ್ ಮಾರ್ಚ್ 16 ರಂದು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅಂದಹಾಗೆ, ಮಾಜಿ ಹಾಸ್ಯನಟರಾಗಿದ್ದ ಭಗವಂತ್ ಮಾನ್ ಒಂದು ಕಾಲದಲ್ಲಿ ತಮ್ಮ ರಾಜಕೀಯ ಪ್ರತಿಸ್ಪರ್ಧಿ ನವಜೋತ್ ಸಿಂಗ್ ಸಿಧು ಅವರನ್ನು ಹಾಸ್ಯ ಕಾರ್ಯಕ್ರಮವೊಂದರಲ್ಲಿ ನಗಿಸಿದ್ದರು ಎಂಬುದು ನಿಮಗೆ ತಿಳಿದಿದೆಯೇ? ಲಾಫರ್ ಚಾಲೆಂಜ್‌ನಲ್ಲಿ ಭಗವಂತ್ ಮಾನ್ ಅವರ ಮಾತು ಶೇಖರ್ ಸುಮನ್ ಅವರೊಂದಿಗೆ ಕಾರ್ಯಕ್ರಮದ ತೀರ್ಪುಗಾರರಾಗಿದ್ದ ಸಿಧು ಅವರನ್ನು ನಗಿಸಿದ್ದ ಹಳೆಯ ವಿಡಿಯೋ ಇದೀಗ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿದೆ.
ಈ ಕಾರ್ಯಕ್ರಮದ ವಿಡಿಯೋದಲ್ಲಿ ಭಗವಂತ್ ಮಾನ್ ಅವರು ರಾಜಕೀಯದ ಬಗ್ಗೆ ವ್ಯಂಗ್ಯವಾಗಿ ವಿಡಂಬನೆ ಮಾಡಿದ್ದರು. ಇದಕ್ಕೆ ಸಿಧು ಜೋರಾಗಿ ನಕ್ಕಿದ್ದರು. ವಿಡಿಯೋದಲ್ಲಿ, ಭಗವಂತ್ ಮಾನ್ ಹೇಳುತ್ತಾರೆ, ರಾಜನೀತಿ (ರಾಜಕೀಯ) ಎಂದರೆ ಏನು ಎಂದು ನಾನು ಒಬ್ಬ ರಾಜಕಾರಣಿಯನ್ನು ಕೇಳಿದೆ. ಅದಕ್ಕೆ ಅವರು ಅದು ಹೇಗೆ ಆಡಳಿತ ನಡೆಸಬೇಕು ಎಂಬುದನ್ನು ನಿರ್ಧರಿಸುವ ಕಾರ್ಯವಾಗಿದೆ ಎಂದು ಹೇಳಿದ್ರು. ಅದಕ್ಕೆ ತಾನು ಸರ್ಕಾರ ಎಂದರೆ ಏನು ಎಂದು ಕೇಳಿದೆ. ಇದರರ್ಥ ಪ್ರತಿ ಸಮಸ್ಯೆಯನ್ನು ಹತ್ತಿರದಿಂದ ನೋಡುವವರು, ಒಂದು ನಿಮಿಷದ ನಂತರ ಅದನ್ನು ಮರೆತುಬಿಡುತ್ತಾರೆ ಎಂದು ಅವರು ಹೇಳಿದ್ರು ಎಂಬುದಾಗಿ ಹೇಳಿದ್ದರು. ಈ ಜೋಕು ಕೇಳಿದ ಸಿಧುಗೆ ನಗು ಬಂದಿತ್ತು.
ಇದೀಗ ವರ್ಷಗಳ ನಂತರ, ಭಗವಂತ್ ಮಾನ್ ಮತ್ತು ಸಿಧು ಇಬ್ಬರೂ ರಾಜಕೀಯದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಸಿಧು ಸೋತಿರುವುದು ಇದೀಗ ಇತಿಹಾಸ. ಆದರೆ ಈ ಹಳೆ ವಿಡಿಯೋ ಈಗ ಹೊಸ ಅರ್ಥವನ್ನು ಪಡೆದುಕೊಂಡಿದೆ.
https://twitter.com/iamup/status/1501798898222133249?ref_src=twsrc%5Etfw%7Ctwcamp%5Etweetembed%7Ctwterm%5E1501798898222133249%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-bhagwant-mann-leaves-sidhu-in-splits-in-old-clip-from-laughter-challenge-watch-5283437%2F