ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆಯೇ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದ್ದು, ಹಾಸನದಲ್ಲಿ ಈ ಬಾರಿ ಪ್ರೀತಮ್ ಗೌಡರ ಎದುರು ಗೆಲುವು ಸಾಧಿಸಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಜೆಡಿಎಸ್ ಭಾರಿ ಪ್ರಚಾರ ನಡೆಸುತ್ತಿದೆ.
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ತಮ್ಮ ಮುನಿಸು ಮರೆತು ಪಕ್ಷದ ಅಭ್ಯರ್ಥಿ ಸ್ವರೂಪ್ ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಹಾಸನ ಗೆದ್ದು ದೇವೇಗೌಡರಿಗೆ ಹುಟ್ಟು ಹಬ್ಬದ ಗಿಫ್ಟ್ ನೀಡುತ್ತೇವೆ ಎಂದು ಹೇಳಿದ್ದಾರೆ.
ಇಂದು ಸ್ವರೂಪ್ ಪರ ಪ್ರಚಾರ ಕಾರ್ಯ ನಡೆಸಿದ ಅವರು, ಪ್ರೀತಂ ಗೌಡರನ್ನು ಸೋಲಿಸಲು ಹೆಚ್.ಡಿ. ರೇವಣ್ಣ ಬೇಕಾಗಿಲ್ಲ. ಕುಮಾರಸ್ವಾಮಿಯವರು ಹೇಳಿದಂತೆ ಸಾಮಾನ್ಯ ಕಾರ್ಯಕರ್ತರೇ ಸಾಕು. ಹಾಸನ ಜಿಲ್ಲೆಯಲ್ಲಿ ರೇವಣ್ಣ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮ್ಮ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಗುಡುಗಿದ್ದಾರೆ.