ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸೊನೊಮಾ ಕೌಂಟಿಯಲ್ಲಿರುವ ಮನೆಯೊಂದರಲ್ಲಿ ಉರಗತಜ್ಞ ಬರೋಬ್ಬರಿ 92 ರ್ಯಾಟಲ್ ಸ್ನೇಕ್ (ವಿಷಸರ್ಪ) ಗಳನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾನೆ.
ಮನೆಯ ಕೆಳಗೆ ಹಾವು ಕಾಣಿಸಿಕೊಂಡಿದ್ದರಿಂದ ಸೊನೊಮಾ ಕೌಂಟಿ ಸರೀಸೃಪ ಪಾರುಗಾಣಿಕಾ ಸಂಸ್ಥೆಯ ಅಲ್ ವುಲ್ಫ್ ಅವರನ್ನು ಮನೆಗೆ ಕರೆಸಲಾಯಿತು.
ಈತ ಕಳೆದ 32 ವರ್ಷಗಳಿಂದ ಹಾವುಗಳನ್ನು ಹಿಡಿದು ರಕ್ಷಿಸುವ ಕೆಲಸ ಮಾಡುತ್ತಾರೆ. ಆದರೆ, ಈ ಮನೆಯ ಅಡಿಯಲ್ಲಿ ಇಷ್ಟೊಂದು ಹಾವುಗಳನ್ನು ಕಂಡು ಅವರು ಗೊಂದಲಕ್ಕೊಳಗಾದರಂತೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ಇಷ್ಟೊಂದು ಹಾವನ್ನು ಒಂದೇ ಸಲ ಹಿಡಿದು ರಕ್ಷಿಸುವ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ.
ಇನ್ನು 92 ಹಾವುಗಳನ್ನು ಹಿಡಿಯಲು ಇವರು ಮೂರು ಗಂಟೆ 45 ನಿಮಿಷಗಳ ಸಮಯ ತೆಗೆದುಕೊಂಡಿದ್ದಾರೆ. ಅಲ್ ವುಲ್ಫ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಾವುಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
“ಮನೆಯಲ್ಲಿ ಹಾವುಗಳಿವೆ ಎಂದು ಯಾರೋ ನನಗೆ ಕರೆ ಮಾಡಿದರು. 3 ಗಂಟೆ 45 ನಿಮಿಷಗಳ ನಂತರ ನಾನು ಹೊರಬಂದದ್ದು.. ನೀವು ಏನು ಮಾಡುತ್ತೀರಿ?” ಎಂದು ಫೋಟೋ ಪೋಸ್ಟ್ ಮಾಡಿ, ಅದಕ್ಕೆ ಶೀರ್ಷಿಕೆ ನೀಡಿದ್ದಾರೆ.
ಇನ್ನು ಈ ಫೋಟೋ ನೋಡಿದ ನೆಟ್ಟಿಗರು ಭಯಮಿಶ್ರಿತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ‘ಡೇಂಜರ್ ಸ್ನೇಕ್ ಮರಿ ನೂಡಲ್ಸ್’ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.
https://www.facebook.com/permalink.php?story_fbid=1868312800005249&id=219602524876293