ತಮಿಳುನಾಡಿನಲ್ಲಿ ಚಾಲಾಕಿ ಮಹಿಳೆಯೊಬ್ಬಳು ನಾಗರಹಾವು ತೋರಿಸಿ, ಜನರನ್ನ ಬೆದರಿಸಿ ಹಣ ಪೀಕಿದ್ದಾಳೆ. ಮಹಿಳೆ ಹಾವಿನ ಜೊತೆಗಿರುವ ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ತಲಾಶ್ ಶುರು ಮಾಡಿದ್ದಾರೆ.
ಮಹಿಳೆ ಒಬ್ಬ ಅಲೆಮಾರಿ ಎಂದು ಪೊಲೀಸರು ಶಂಕಿಸಿದ್ದಾರೆ. ತಾನು ವೆಲ್ಲುಪುರಂ ನಿವಾಸಿಯೆಂದು ಆಕೆ ಜನರ ಬಳಿ ಹೇಳಿಕೊಂಡಿದ್ದಾಳಂತೆ. ಮನೆಮನೆಗೆ ತೆರಳ್ತಾ ಇದ್ದ ಆಕೆ ಹಣ ಮತ್ತು ಬಟ್ಟೆ ಕೇಳುತ್ತಿದ್ಲು.
ಕೊಡಲು ಜನರು ನಿರಾಕರಿಸಿದ್ರೆ ಬುಟ್ಟಿಯಲ್ಲಿದ್ದ ನಾಗರ ಹಾವನ್ನು ಹೊರತೆಗೆದು ಬೆದರಿಸುತ್ತಿದ್ಲು. ಇದರಿಂದ ಭಯಭೀತರಾದ ಜನ ಆಕೆ ಕೇಳಿದ್ದನ್ನೆಲ್ಲ ಕೊಟ್ಟು ಕಳುಹಿಸುತ್ತಿದ್ರು. ಯಾರೋ ಇದನ್ನು ವಿಡಿಯೋ ಮಾಡಿ ಇಂಟರ್ನೆಟ್ ನಲ್ಲಿ ಹರಿಬಿಟ್ಟಿದ್ದರಿಂದ ಪೊಲೀಸರು ಅಲರ್ಟ್ ಆಗಿದ್ದಾರೆ.
ತಂಬರಮ್ ಎಂಬಲ್ಲಿ ಆಕೆಯ ಮಗ ನೆಲೆಸಿದ್ದಾನಂತೆ. ಆಗಾಗ ಮಗನನ್ನು ಭೇಟಿ ಮಾಡಲು ತೆರಳ್ತಿದ್ದ ಮಹಿಳೆ, ನಾಗರಹಾವನ್ನು ಬುಟ್ಟಿಯಲ್ಲಿಟ್ಟುಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಿದ್ಲು ಅನ್ನೋದು ಸಹ ಗೊತ್ತಾಗಿದೆ.