ಮೊದಲನೇಯದಾಗಿ ದೇಶದಲ್ಲಿ 550 ಜಾತಿಯ ಹಾವುಗಳಿವೆ. ನಾಗರಹಾವು, ಹೆಬ್ಬಾವು, ಕಾಳಿಂಗ ಸರ್ಪ ಹೀಗೆ 550 ಜಾತಿಯ ಹಾವುಗಳಿವೆ. ಹೆದರಬೇಕಾಗಿಲ್ಲ. ಈ ಎಲ್ಲ ಹಾವುಗಳಿಗೂ ವಿಷವಿಲ್ಲ. ಕೇವಲ 10 ಜಾತಿಯ ಹಾವು ಕಚ್ಚಿದ್ರೆ ಮಾತ್ರ ವಿಷವೇರುತ್ತೆ. ಹಾಗಾಗಿ 540 ಹಾವುಗಳು ಕಚ್ಚಿದ್ರೆ ಭಯಗೊಳ್ಳಬೇಕಾಗಿಲ್ಲ.
ಆದ್ರೆ ಹಾವನ್ನು ಕಂಡ್ರೆ ಜನ ಭಯಗೊಳ್ತಾರೆ. ಹಾವು ಕಚ್ಚಿ, ವಿಷವೇರಿ ಸಾಯುವವರಿಗಿಂತ ಹೃದಯಾಘಾತದಿಂದ ಸಾವನ್ನಪ್ಪುವವರೇ ಹೆಚ್ಚು. ಮೊದಲು ಹಾವಿನ ಭಯ ಬಿಡಬೇಕು. ಕಚ್ಚಿದ ತಕ್ಷಣ ಹಾವು ಯಾವುದು ಅಂತಾ ನೋಡಿಕೊಳ್ಳಿ. ಹಾವಿನ ಜಾತಿಯ ಬಗ್ಗೆ ತಿಳಿದಿಲ್ಲವಾದ್ರೆ ಚಿಂತೆಯಿಲ್ಲ. ಹಾವಿನ ವಿಷ ಇಡೀ ದೇಹವನ್ನು ಪಸರಿಸಲು 3 ಗಂಟೆ ಬೇಕು.
ಕೆಲವೊಂದು ವಿಷಕಾರಿ ಹಾವುಗಳು ಕಚ್ಚಿದ್ರೆ ಶೇಕಡಾ 99 ರಷ್ಟು ಬದುಕುಳಿಯುವುದು ಕಷ್ಟ. ಹಾಗಂತ ಬದುಕೋದೆ ಇಲ್ಲ ಎಂದಲ್ಲ. ಹಾವು ಕಚ್ಚಿದ ಜಾಗಕ್ಕಿಂತ ಸ್ವಲ್ಪ ಮೇಲೆ ವಿಷವೇರದಂತೆ ಬಿಗಿಯಾದ ಪಟ್ಟಿ ಕಟ್ಟುವುದು ಬಹಳ ಅವಶ್ಯಕ. ಹಾವು ಕಾಲಿಗೆ ಕಚ್ಚಿದ್ರೆ ಅದು ರಕ್ತದ ಮೂಲಕ ಮೊದಲು ಹೃದಯಕ್ಕೆ ಹೋಗಿ ನಂತ್ರ ಇಡೀ ದೇಹಕ್ಕೆ ಪಸರಿಸುತ್ತದೆ. ಹಾಗೆ ಕೈಗೆ ಕಚ್ಚಿದ್ರೂ ಮೊದಲು ಹೃದಯಕ್ಕೆ ಹೋಗಿ ನಂತ್ರ ಇಡೀ ದೇಹಕ್ಕೆ ಹರಡುತ್ತದೆ. ಹಾಗಾಗಿ ಕಚ್ಚಿದ ತಕ್ಷಣ ವಿಷ ಮೇಲೇರದಂತೆ ಪಟ್ಟಿ ಕಟ್ಟಿ. ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿ.