ಹಾಲುಣಿಸುವ ತಾಯಂದಿರು ಬಹುಬೇಗ ಕ್ಯಾಲ್ಸಿಯಂ ಕೊರತೆಯ ಸಮಸ್ಯೆಗೆ ಒಳಗಾಗುತ್ತಾರೆ. ಇದನ್ನು ಸಮತೋಲನದಲ್ಲಿಟ್ಟು ಹಾಲು ಹೆಚ್ಚಿಸಿಕೊಳ್ಳಲು ಈ ಕೆಳಗಿನ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ.
ನಿತ್ಯ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ. ಜೀರ್ಣ ಸಂಬಂಧಿ ಸಮಸ್ಯೆಯನ್ನು ದೂರಮಾಡಿ ಪೊಟ್ಯಾಷಿಯಂ ಹೆಚ್ಚಿಸುವ ಹಣ್ಣುಗಳನ್ನು ಸೇವಿಸುವುದರಿಂದ ಹೆರಿಗೆಯ ನಂತರದ ರಕ್ತದ ಒತ್ತಡ, ಮಲಬದ್ಧತೆ ಮೊದಲಾದ ಸಮಸ್ಯೆಗಳು ದೂರವಾಗುತ್ತವೆ.
ಮಗುವಿಗೆ ಹಾಲುಣಿಸುವ ತಾಯಂದಿರು ಕನಿಷ್ಠ ಎರಡರಿಂದ ಮೂರು ಕಪ್ ತರಕಾರಿ ಸೇವಿಸಬೇಕು. ಪಾಲಕ್, ಹರಿವೆ, ಬಸಳೆ ಸೊಪ್ಪುಗಳು ಕಡ್ಡಾಯವಾಗಿ ನಿಮ್ಮ ಊಟದ ಮೆನುವಿನಲ್ಲಿರಲಿ. ಕ್ಯಾರೆಟ್, ಟೊಮೆಟೊ ಹಾಗೂ ಕುಂಬಳಕಾಯಿಯನ್ನು ಮರೆಯದೆ ತಿನ್ನಿ.
ದ್ವಿದಳ ಧಾನ್ಯಗಳು, ಗೋಡಂಬಿ ಹಾಗೂ ಬಾದಾಮಿಯನ್ನು ಸೇವಿಸುವುದರಿಂದ ಎದೆಹಾಲು ಹೆಚ್ಚುವುದು ಮಾತ್ರವಲ್ಲ ಇದು ಎದೆಹಾಲಿನ ಮೂಲಕ ಮಕ್ಕಳಿಗೂ ತಲುಪಿ ಅವರ ಮೆದುಳಿನ ಬೆಳವಣಿಗೆ ಚುರುಕುಗೊಳ್ಳಲು ಸಹಾಯ ಮಾಡುತ್ತದೆ.
ಹಾಲು ಮೊಸರು ಹಾಗೂ ತುಪ್ಪವನ್ನು ಹೇರಳವಾಗಿ ಸೇವಿಸಿ. ಈ ಸಮಯದಲ್ಲಿ ಯಾವ ವಸ್ತುವನ್ನು ಸೇವಿಸಿದರೂ ಅದು ಕೊಬ್ಬಾಗಿ ಬದಲಾಗುವುದಿಲ್ಲ. ದಪ್ಪವಾಗುವ ಭೀತಿ ಬಿಟ್ಟು ತುಪ್ಪ, ಮೊಸರು ಸೇವಿಸಿ.