
ವಿಜಯ್ ಹಜಾರೆ ಟ್ರೋಫಿಯಲ್ಲಿ ಶನಿವಾರ ನಡೆದ ಹಾಲಿ ಚಾಂಪಿಯನ್ ಮುಂಬಯಿ ವಿರುದ್ಧ ಕರ್ನಾಟಕ ತಂಡ 7 ವಿಕೆಟ್ ಗಳಿಂದ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬಯಿ ತಂಡ 208 ರನ್ ಗಳ ಸಾಧಾರಣ ಮೊತ್ತದ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 7 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.
ಕರ್ನಾಟಕದ ಪರ ಪ್ರವೀಣ್ ದುಬೇ ಭರ್ಜರಿ ಬೌಲಿಂಗ್ ಮಾಡಿ ಮುಂಬಯಿ ತಂಡ ನಿಯಂತ್ರಿಸಿದರು. ಪ್ರವೀಣ್ 29 ರನ್ ನೀಡಿ ಅಮೂಲ್ಯ 4 ವಿಕೆಟ್ ಪಡೆದಿದ್ದಾರೆ. ಕರ್ನಾಟಕದ ಆರಂಭ ಕೂಡ ಉತ್ತಮವಾಗಿತ್ತು. ಆರಂಭಿಕರಾದ ರವಿಕುಮಾರ್ ಸಮರ್ಥ್ ಹಾಗೂ ರೋಹನ್ ಕದಮ್ 95 ರನ್ ಗಳ ಜೊತೆಯಾಟ ನೀಡಿದರು.
ಆ ನಂತರ ಕರ್ನಾಟಕದ ರೋಹನ್ ಕದಮ್(44) ಔಟ್ ಆದರು. ಸಿದ್ಧಾರ್ಥ್ ಕೆವಿ(17), ನಾಯಕ ಮನೀಷ್ ಪಾಡೆಂ(5) ರನ್ ಗಳಿಸಿ ಔಟ್ ಆಗಿದ್ದರು. ಈ ಸಂದರ್ಭದಲ್ಲಿ ಕರ್ನಾಟಕದ ಮೊತ್ತ 134 ರನ್ ಆಗಿತ್ತು. ಆಗ ಒಂದು ಹಂತದಲ್ಲಿ ಕರ್ನಾಟಕ ಒತ್ತಡದಲ್ಲಿತ್ತು.
ಆ ಸಂದರ್ಭದಲ್ಲಿ ಕರುಣ್ ನಾಯರ್ ಹಾಗೂ ಸಮರ್ತ್ ಉತ್ತಮವಾಗಿ ಆಡಿದರು. ಈ ಜೋಡಿ 77 ರನ್ ಗಳ ಕಾಣಿಕೆ ನೀಡಿತು. 129 ಎಸೆತಗಳಲ್ಲಿ 96 ರನ್ ಗಳಿಸಿ ಶತಕ ವಂಚಿತರಾದರು. ಕರುಣ್ ನಾಯರ್ 39 ರನ್ ಗಳಿಸಿದರು. ಇವರ ಸಮಯೋಚಿತ ಆಟದಿಂದ ಕರ್ನಾಟಕ ತಂಡ ಗೆದ್ದು ಬೀಗಿದೆ. ಮುಂದಿನ ಪಂದ್ಯದಲ್ಲಿ ಕರ್ನಾಟಕ ತಂಡವು ಬರೋಡ ತಂಡವನ್ನು ಎದುರಿಸಲಿದೆ.