ಹಾಲು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು. ಈ ವಿಷ್ಯ ಎಲ್ಲರಿಗೂ ಗೊತ್ತು. ಆದ್ರೆ ಪದೇ ಪದೇ ಹಾಲು ಕುದಿಸೋದು ಆರೋಗ್ಯಕ್ಕೆ ಹಾನಿಕರ. ಈ ವಿಷ್ಯ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಹಾಲು ಹಾಳಾಗುತ್ತೆ ಅಂತಾ ಪದೇ ಪದೇ ಹಾಲನ್ನು ಬಿಸಿ ಮಾಡಿ ಕುಡಿದ್ರೆ ಅದು ನಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ಹಾಲನ್ನು ಒಮ್ಮೆ ಕುದಿಸೋದು ಒಳ್ಳೆಯದು. ಆದ್ರೆ ಪದೇ ಪದೇ ಹಾಲನ್ನು ಬಿಸಿ ಮಾಡಿದ್ರೆ ಇದ್ರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುತ್ತದೆ ಅಧ್ಯಯನ. ಹಾಲನ್ನು ಅನೇಕ ಬಾರಿ ಬಿಸಿ ಮಾಡುವುದರಿಂದ ಹಾಲಿನಲ್ಲಿರುವ ಪೋಷಕಾಂಶ ಕಡಿಮೆಯಾಗುತ್ತದೆ. ಪೋಷಕಾಂಶ ಕಡಿಮೆಯಾಗುತ್ತದೆ ಎನ್ನುವ ವಿಚಾರ ಶೇಕಡಾ 17 ರಷ್ಟು ಮಹಿಳೆಯರಿಗೆ ಮಾತ್ರ ಗೊತ್ತು ಎಂಬ ವಿಷಯವನ್ನೂ ಅಧ್ಯಯನ ತಂಡ ಸ್ಪಷ್ಟಪಡಿಸಿದೆ.
ಹಾಲನ್ನು ಒಮ್ಮೆ ಬಿಸಿ ಮಾಡಿದ ನಂತ್ರ ಫ್ರಿಜ್ ನಲ್ಲಿಡಿ. ಕೇವಲ 2-3 ನಿಮಿಷ ಮಾತ್ರ ಹಾಲನ್ನು ಬಿಸಿ ಮಾಡಿ. ಹಾಲು ಬಿಸಿ ಮಾಡುವಾಗ ಚಮಚದಿಂದ ಕಲಕುತ್ತಿರಿ. ಹಾಲು ಕಾಯಿಸಿ ತಣಿದ ನಂತರ ತೆಗೆದು ಪ್ರಿಜ್ ನಲ್ಲಿಡಿ. ಹೀಗೆ ಮಾಡಿದ್ರೆ ಪದೇ ಪದೇ ಹಾಲನ್ನು ಬಿಸಿ ಮಾಡುವ ತಾಪತ್ರಯ ಇರೋದಿಲ್ಲ. ಜೊತೆಗೆ ಹಾಲು ಬೇಗ ಹಾಳಾಗುತ್ತೆ ಎನ್ನುವ ಭಯ ಇರೋದಿಲ್ಲ. ಹಾಲಿನಲ್ಲಿರುವ ಪೋಷಕಾಂಶ ನಿಮಗೆ ಸಂಪೂರ್ಣವಾಗಿ ಸಿಗುತ್ತೆ.