ನಾಗಾಲ್ಯಾಂಡ್: ನಾಗಾಲ್ಯಾಂಡ್‌ನಲ್ಲಿ ನಡೆಯುತ್ತಿರುವ ಹಾರ್ನ್‌ಬಿಲ್ ಉತ್ಸವದಲ್ಲಿ ರಾಷ್ಟ್ರಗೀತೆ ಎಲ್ಲರ ಗಮನ ಸೆಳೆಯಿತು. ಪ್ರಸ್ತುತ ನಾಗಾಲ್ಯಾಂಡ್‌ನಲ್ಲಿ 10 ದಿನಗಳ ಹಾರ್ನ್‌ಬಿಲ್ ಉತ್ಸವ ನಡೆಯುತ್ತಿದೆ. ರಾಷ್ಟ್ರದಾದ್ಯಂತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪ್ರವಾಸಿಗರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಗಮನ ಸೆಳೆದಿದ್ದು ರಾಷ್ಟ್ರಗೀತೆ. ಇದರ ವಿಡಿಯೋ ಅನ್ನು ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ. ನಾಗಾಲ್ಯಾಂಡ್ ಸಂಗೀತಗಾರ್ತಿಯಾಗಿರುವ ಇಮ್ನೈನ್ಲಾ ಜಮೀರ್ ಅವರು ಎಲೆಕ್ಟ್ರಿಕ್ ಗಿಟಾರ್‌ನಲ್ಲಿ ಜನ ಗಣ ಮನ ನುಡಿಸಿ ಎಲ್ಲರ ಶ್ಲಾಘನೆಗೆ ಪಾತ್ರರಾದರು.
ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್, ನಾಗಾಲ್ಯಾಂಡ್‌ನ ರಾಜ್ಯಪಾಲ ಜಗದೀಶ್ ಮುಖಿ ಸೇರಿದಂತೆ ಗಣ್ಯರು ಕೂಡ ಈ ಸಂಗೀತಕ್ಕೆ ಮಾರು ಹೋದರು.
“ಭಾರತ ಎಷ್ಟು ಅದ್ಭುತವಾಗಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ“ ಎಂದು ಅವರು ಶೀರ್ಷಿಕೆ ಕೊಟ್ಟಿದ್ದಾರೆ. ಈ ವಿಡಿಯೋ ಇದಾಗಲೇ ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, ಜನರು ಶ್ಲಾಘನೆಗಳ ಸುರಿಮಳೆಯನ್ನೇ ಗೈಯುತ್ತಿದ್ದಾರೆ.