
ಹೌದು, ಹಾರ್ದಿಕ್ ಪಾಂಡ್ಯ ಅರ್ಧಶತಕ ಗಳಿಸಿದರೆ ಕೆಲಸ ಬಿಡುವುದಾಗಿ ಭರವಸೆ ನೀಡಿದ ಐಪಿಎಲ್ ಅಭಿಮಾನಿಯೊಬ್ಬರು ತಿಳಿಸಿದ್ದಾರೆ. ಇದು ನಿಜವಾಗಿಯೂ ಈಗ ಅವರ ಕೆಲಸವನ್ನು ಕಳೆದುಕೊಂಡಿರಬಹುದು.
ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಪಂದ್ಯದ ವೇಳೆ, ಒಬ್ಬ ವ್ಯಕ್ತಿ ಈ ರೀತಿ ಬ್ಯಾನರ್‌ನಲ್ಲಿ ಬರೆದಿದ್ದ. ಹಾರ್ದಿಕ್ 50 ರನ್ ಹೊಡೆದರೆ, ತಾನು ಕೆಲಸಕ್ಕೆ ರಾಜೀನಾಮೆ ನೀಡುವುದಾಗಿ ಬರೆದಿದ್ದ ಬ್ಯಾನರ್ ಹಿಡಿದುಕೊಂಡಿದ್ದ.
ಪಾಂಡ್ಯ ಮೈದಾನದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. 42 ಎಸೆತಗಳಲ್ಲಿ ಪಾಂಡ್ಯ 50 ರನ್ ಸಿಡಿಸಿದ್ದಾರೆ. ಈ ಮೂಲಕ ಗುಜರಾತ್ ತಂಡದಲ್ಲಿ ಅತಿ ಹೆಚ್ಚು ಸ್ಕೋರ್ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ ಅರ್ಧಶತಕ ಸಿಡಿಸಿದ ಸಂಭ್ರಮ ಆಚರಿಸುತ್ತಿದ್ದಂತೆ ಬ್ಯಾನರ್ ನತ್ತ ಕ್ಯಾಮರಾ ತಿರುಗಿದೆ. ಹೀಗಾಗಿ ಕೂಡಲೇ ಆತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ. ನೆಟ್ಟಿಗರು ಉಲ್ಲಾಸದ ಮೀಮ್ ಗಳು ಮತ್ತು ಜೋಕ್ ಗಳನ್ನು ಸೃಷ್ಟಿಸಿದ್ದಾರೆ.