
ದೆಹಲಿ – ಔರಂಗಾಬಾದ್ ನಡುವೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಹಠಾತ್ ಅಸ್ವಸ್ಥಗೊಂಡಿದ್ದು, ನಿಯಮಾವಳಿಗಳಂತೆ ವಿಮಾನ ಸಿಬ್ಬಂದಿ, ವಿಮಾನದಲ್ಲಿ ಯಾರಾದರೂ ವೈದ್ಯರು ಇದ್ದರೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದಾರೆ.
ಇದೇ ವಿಮಾನದಲ್ಲಿ ಕೇಂದ್ರ ಸಚಿವ ಬಿ.ಕೆ. ಕರಾಡ್ ಹಾಗೂ ಬಿಜೆಪಿ ಸಂಸದ ಡಾ. ಸುಭಾಷ್ ಭಾಮ್ರೆ ಪ್ರಯಾಣಿಸುತ್ತಿದ್ದು ಕೂಡಲೇ ಅಸ್ವಸ್ಥಗೊಂಡ ಪ್ರಯಾಣಿಕನ ಚಿಕಿತ್ಸೆಗೆ ಧಾವಿಸಿದ್ದಾರೆ. ಈ ವಿಷಯವನ್ನು ಏರ್ ಇಂಡಿಯಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.