ಡೆಲ್ಟಾ ಏರ್ ಲೈನ್ಸ್ ವಿಮಾನದಲ್ಲಿ ಮಾಸ್ಕ್ ಧರಿಸದೇ ಊಟ ಮಾಡುತ್ತಿದ್ದ ವೃದ್ಧರೊಬ್ಬರ ಮೇಲೆ ಮಹಿಳೆಯೊಬ್ಬಳು ಹಲ್ಲೆ ನಡೆಸಿರುವ ಅಮಾನುಷ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಮಾಸ್ಕ್ ಧರಿಸದೆ ಊಟ ಮಾಡಿದ್ದಕ್ಕೆ ವಯೋವೃದ್ಧನ ಮೇಲೆ ಮಹಿಳೆಯೊಬ್ಬಳು ಹಲ್ಲೆ ನಡೆಸಿದ್ದಾಳೆ. ವಿಚಿತ್ರ ಅಂದ್ರೆ ಗಲಾಟೆ ಮಾಡಿದ ಮಹಿಳೆ ಸ್ವತಃ ಮಾಸ್ಕ್ ಧರಿಸಿರಲಿಲ್ಲ. ವಿಮಾನವು ಅಟ್ಲಾಂಟಾದಲ್ಲಿ ಇಳಿದ ನಂತರ ಪೆಟ್ರೀಷಿಯಾ ಕಾರ್ನ್ವಾಲ್ ಎಂದು ಗುರುತಿಸಲ್ಪಟ್ಟ ಮಹಿಳೆಯನ್ನು ಎಫ್ಬಿಐ ಬಂಧಿಸಿದೆ.
ನಾನು ಬದುಕಿರುವವರೆಗೂ ಭಾರತವನ್ನ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ-ರಶೀದ್ ಖಾನ್
ಪೆಟ್ರೀಷಿಯಾ ತಮ್ಮ ಸೀಟಿನಲ್ಲಿ ಆಸೀನರಾಗಿದ್ದ 80 ವರ್ಷದ ವೃದ್ಧರ ವಿರುದ್ಧ ಆಕ್ರಮಣಕಾರಿಯಾಗಿ ಮಾತನಾಡಿದ್ದಾಳೆ. ಈ ವೇಳೆ ವಯೋವೃದ್ಧರು ಆಕೆಯನ್ನು ಕರೆನ್ ಎಂದು ಕರೆದು ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಕರೆನ್ ಎಂಬುದು ಆಡುಭಾಷೆಯ ಪದ ಅಥವಾ ಅವಹೇಳನಕಾರಿ ಪದ ಎಂದು ಹೇಳಲಾಗಿದೆ.
ವಿಮಾನದಲ್ಲಿದ್ದ ಇತರ ಪ್ರಯಾಣಿಕರು ಮಹಿಳೆಗೆ ತನ್ನ ಆಸನದಲ್ಲಿ ಕುಳಿತುಕೊಳ್ಳಲು ಹೇಳುತ್ತಿದ್ದಂತೆ, ಅವಳು ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಸಹಾಯಕರು ಬಂದು ಆಕೆಯನ್ನು ಎಳೆದುಕೊಂಡು ಹೋಗಿದ್ದಾರೆ.
ಮಾಸ್ಕ್ ಅನ್ನು ಹಾಕಿಕೊಳ್ಳಿ ಎಂದು ಮಹಿಳೆ ವೃದ್ಧ ವ್ಯಕ್ತಿಯ ಮೇಲೆ ಕೂಗಿದ್ದಾಳೆ. ಅಲ್ಲದೆ ಸಿಬ್ಬಂದಿ ಬಳಿಯೂ ಅವರಿಗೆ ಹೇಳುವಂತೆ ಆದೇಶಿಸಿದ್ದಾಳೆ. ವರದಿಗಳ ಪ್ರಕಾರ, ವಿಮಾನವು ಹಾರ್ಟ್ಸ್ಫೀಲ್ಡ್-ಜಾಕ್ಸನ್ ಅಟ್ಲಾಂಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಮಹಿಳೆಯನ್ನು ಬಂಧಿಸಲಾಯಿತು.