ಸಾಮಾನ್ಯವಾಗಿ ಭಯ ಹುಟ್ಟಿಸುವ ಸಿನಿಮಾವನ್ನು ಮಕ್ಕಳಿಗೆ ನೋಡಲು ಬಿಡುವುದಿಲ್ಲ. ಹಾರರ್ ಚಿತ್ರ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಭಯಗೊಳ್ಳುವಂತೆ ಮಾಡುತ್ತದೆ ಎನ್ನುವ ಕಾರಣಕ್ಕೆ ಹಾರರ್ ಚಿತ್ರಗಳನ್ನು ಮಕ್ಕಳಿಗೆ ತೋರಿಸುವುದಿಲ್ಲ. ಆದ್ರೆ ಇದೇ ಹಾರರ್ ಚಿತ್ರ ನಿಮ್ಮ ಆರೋಗ್ಯ ಸುಧಾರಿಸುತ್ತದೆ ಎಂಬುದನ್ನು ನಂಬುತ್ತೀರಾ?
ನಾವಲ್ಲ ಸ್ವಾಮಿ, ತಜ್ಞರು ಯಸ್ ಎನ್ನುತ್ತಿದ್ದಾರೆ. ಹಾರರ್ ಚಿತ್ರಗಳು ನಿಮ್ಮ ತೂಕ ಇಳಿಸಲು ನೆರವಾಗುತ್ತದೆಯಂತೆ. ಜಿಮ್ ಗೆ ಹೋಗಲು ಸಮಯವಿಲ್ಲವೆಂದಾದ್ರೆ ಸಮಯ ಸಿಕ್ಕಾಗ ಹಾರರ್ ಚಿತ್ರ ವೀಕ್ಷಿಸಲು ಶುರು ಮಾಡಿ. 90 ನಿಮಿಷದ ಹಾರರ್ ಚಿತ್ರ 113 ಕ್ಯಾಲೋರಿ ಬರ್ನ್ ಮಾಡುತ್ತದೆಯಂತೆ.
ಭಯಪಡುವ ಸಿನಿಮಾ ನೋಡಿದಾಗ ಅಡ್ರಿನಾಲಿನ್ ಹಾರ್ಮೋನ್ ಸ್ರವಿಸುತ್ತದೆ. ಇದು ಹೃದಯ ಬಡಿತವನ್ನು ದ್ವಿಗುಣಗೊಳಿಸುತ್ತದೆ. ಹಾರರ್ ಸಿನಿಮಾ ನೋಡುವವರ ಪ್ರತಿರಕ್ಷಣಾ ಶಕ್ತಿ ಹೆಚ್ಚಾಗುತ್ತದೆಯಂತೆ. ಜೊತೆಗೆ ಮಾನಸಿಕವಾಗಿ ಅವ್ರು ಗಟ್ಟಿಯಾಗ್ತಾರಂತೆ.
ಒತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳು ಹಾರರ್ ಚಿತ್ರಗಳನ್ನು ನೋಡ್ಬೇಕಂತೆ. ಹಾರರ್ ಚಿತ್ರಗಳು ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ರಿಲ್ಯಾಕ್ಸ್ ನೀಡುತ್ತವೆ.