ಶುಕ್ರವಾರ ಸಂಜೆ ಈಶಾನ್ಯ ದೆಹಲಿಯ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ, ಪುರುಷರ ಗುಂಪೊಂದು ಅವರ ಸಂಬಂಧಿಕರ ಮೇಲೆ ಕೋಲು ಮತ್ತು ಬ್ಯಾಟ್ಗಳಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಆಸ್ತಿ ವಿವಾದದಿಂದ ಈ ಗಲಾಟೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಡಹಗಲೇ ನಡುರಸ್ತೆಯಲ್ಲೇ ವ್ಯಕ್ತಿಗಳ ಗುಂಪೊಂದು ವ್ಯಕ್ತಿಯೋರ್ವನನ್ನು, ದೊಣ್ಣೆಯಿಂದ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಲಾಟೆಯ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೋರ್ವರು, ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ತಲುಪಿದ ಪೊಲೀಸ್ ತಂಡ, ಘಟನಾ ಸ್ಥಳದಲ್ಲಿ ಗಲಭೆಯಂತಹ ಪರಿಸ್ಥಿತಿ ಸೃಷ್ಟಿಯಾಗಿರುವುದನ್ನ ಗಮನಿಸಿದ್ದಾರೆ. ಅಷ್ಟೇ ಅಲ್ಲಾ ಪುರುಷರ ಗುಂಪು ವ್ಯಕ್ತಿಯನ್ನ ಥಳಿಸಿರುವುದನ್ನು ಕಂಡುಕೊಂಡಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಗಾಯಾಳುವನ್ನು ಜೆಪಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಜಗತ್ (62), ಹರೇಂದರ್ (41), ಸುಮಿತ್ (29) ಮತ್ತು ಅಮಿತ್ (24) ಎಂಬ ನಾಲ್ವರು, ತಮ್ಮ ಸಂಬಂಧಿಕನನ್ನು ಥಳಿಸಿದ್ದಾರೆಂದು ತಿಳಿದುಬಂದಿದೆ. ಆದರೆ ಪೊಲೀಸರು ಇಲ್ಲಿಯವರೆಗೆ ಜಗತ್‌ನನ್ನು ಮಾತ್ರ ಬಂಧಿಸಿದ್ದಾರೆ.
ಜಗತ್ ಹಾಗೂ ಅವರ ಮೂವರು ಮಕ್ಕಳು, ಶ್ಯಾಮ್ ಎನ್ನುವವರೊಂದಿಗೆ ಆಸ್ತಿಗಾಗಿ ಮಾರಾಮಾರಿ ನಡೆದಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜಗತ್ ತನ್ನನ್ನು ತಾನು ಬಿಜೆಪಿ ನಾಯಕ ಹಾಗೂ ವಕೀಲ ಎಂದು ಹೇಳಿಕೊಂಡಿದ್ದನಲ್ಲದೇ, ಮನೆಯ ಮುಂದೆ ಬಿಜೆಪಿಯ ಚಿಹ್ನೆ ಹಾಗೂ ಅಡ್ವೋಕೇಟ್ ಎಂಬ ನಕಲಿ ಬೋರ್ಡ್ ಹಾಕಿದ್ದರು. ಇಬ್ಬರ ನಡುವೆ ಆಸ್ತಿಗಾಗಿ ಮೊದಲಿನಿಂದಲು ದ್ವೇಷವಿತ್ತು, ಇಬ್ಬರು ಒಬ್ಬರೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಬಗ್ಗೆ ತನಿಖೆ ಜಾರಿಯಲ್ಲಿದೆ ಎಂದು ಡಿಸಿಪಿ ತಿಳಿಸಿದ್ದಾರೆ.