ಹಾಗಲಕಾಯಿ ತುಂಬಾ ಕಹಿ. ಹಾಗಾಗಿ ಹಾಗಲಕಾಯಿ ತಿನ್ನೋರ ಸಂಖ್ಯೆ ಬಹಳ ಕಡಿಮೆ. ಹಾಗಲಕಾಯಿ ಕಹಿ ಎನ್ನುವ ಕಾರಣಕ್ಕೆ ಅದನ್ನು ಕೆಲವರು ಮಾರುಕಟ್ಟೆಯಿಂದ ತರೋದೆ ಇಲ್ಲ. ಇನ್ನು ಕೆಲವರು ಪದಾರ್ಥ ಮಾಡಿ ಕಹಿ-ಕಹಿ ಎನ್ನುತ್ತಲೇ ಬಾಯಿಗೆ ಹಾಕ್ತಾರೆ. ಕೆಲವೊಂದು ಟಿಪ್ಸ್ ಬಳಸಿ ಕಹಿಯಾಗದಂತೆ ಹಾಗಲಕಾಯಿ ಪದಾರ್ಥ ಮಾಡಿ ಸವಿಯಬಹುದು.
ಹಾಗಲಕಾಯಿಯನ್ನು ಸ್ವಚ್ಛಮಾಡಿ ಸಣ್ಣದಾಗಿ ಕಟ್ ಮಾಡಿ ಅದಕ್ಕೆ ಉಪ್ಪು ಹಾಕಿ ಒಂದು ಗಂಟೆ ಹಾಗೆ ಬಿಡಿ. ನಂತ್ರ ಅದನ್ನು ನೀರಿನಲ್ಲಿ ತೊಳೆದು ಅಡುಗೆಗೆ ಬಳಸಿ.
ಹಾಗಲಕಾಯಿಯನ್ನು ಕಟ್ ಮಾಡಿ ಅದನ್ನು ಅಕ್ಕಿ ತೊಳೆದ ನೀರಿನಲ್ಲಿ ನೆನೆಸಿಡಿ. ಅರ್ಧ ಗಂಟೆ ನಂತ್ರ ಅಡುಗೆಗೆ ಬಳಸಿದ್ರೆ ಹಾಗಲಕಾಯಿ ಕಹಿ ಎನ್ನೋದು ಗೊತ್ತಾಗೋದಿಲ್ಲ.
ಮೆಂತ್ಯ ಸೊಪ್ಪನ್ನು ಕೂಡ ಕಟ್ ಮಾಡಿ ಉಪ್ಪಿನ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆ ಹಾಕಿ. ನಂತ್ರ ಅಡುಗೆಗೆ ಬಳಸಿದ್ರೆ ಅದ್ರಲ್ಲಿರುವ ಕಹಿ ಮಾಯವಾಗುತ್ತದೆ.
ಪಾಲಾಕ್ ಬೇಯಿಸುವ ವೇಳೆ ಅದಕ್ಕೆ ಚಿಟಕಿ ಸಕ್ಕರೆ ಹಾಕಿ ಬೇಯಿಸಿದಲ್ಲಿ ಅದ್ರ ಬಣ್ಣ ಹಾಗೂ ರುಚಿ ಎರಡೂ ಬದಲಾಗಲಿದೆ.