ಹಾಗಲಕಾಯಿ ಎಂದರೆ ಮುಖ ಕಿವುಚುವವರೇ ಜಾಸ್ತಿ. ಇದೇ ಹಾಗಲಕಾಯಿ ಬಳಸಿಕೊಂಡು ರುಚಿಕರವಾದ ಚಿಪ್ಸ್ ಮಾಡಬಹುದು. ಸಂಜೆಯ ಸ್ನ್ಯಾಕ್ಸ್ ಗೆ ಇದು ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
1 ½ ಕಪ್ ನಷ್ಟು – ವೃತ್ತಾಕಾರವಾಗಿ ಕತ್ತರಿಸಿದ ಹಾಗಲಕಾಯಿ, ½ ಕಪ್ – ಕಡಲೆಹಿಟ್ಟು. 1 ಟೇಬಲ್ ಸ್ಪೂನ್ – ಅಕ್ಕಿಹಿಟ್ಟು, ¼ ಟೀ ಸ್ಪೂನ್ – ಅರಿಶಿನ, ½ ಟೀ ಸ್ಪೂನ್ – ಖಾರದ ಪುಡಿ, 1 ಟೀ ಸ್ಪೂನ್ – ಡ್ರೈ ಮ್ಯಾಂಗೋ ಪುಡಿ, ¾ ಟೀ ಸ್ಪೂನ್ – ಸೋಂಪು, ಎಣ್ಣೆ ಕರಿಯಲು, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಒಂದು ಬೌಲ್ ಗೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಸೋಂಪು, ಖಾರದ ಪುಡಿ, ಅರಿಶಿನ, ಡ್ರೈ ಮ್ಯಾಂಗೋ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಹಾಗಲಕಾಯಿ ತುಂಡುಗಳನ್ನು ಹಾಕಿ ಸ್ವಲ್ಪ ನೀರನ್ನು ಚಿಮುಕಿಸಿಕೊಳ್ಳಿ. ಹಾಗಲಕಾಯಿಗೆ ಹಿಟ್ಟಿನ ಮಿಶ್ರಣವೆಲ್ಲಾ ಚೆನ್ನಾಗಿ ಅಂಟಿಕೊಳ್ಳುವವರೆಗೆ ನೀರನ್ನು ಸೇರಿಸಿ. ಗ್ಯಾಸ್ ಮೇಲೆ ಎಣ್ಣೆ ಬಾಣಲೆ ಇಟ್ಟು ಅದು ಬಿಸಿಯಾದಾಗ ಈ ಹಾಗಲಕಾಯಿಯ ಪೀಸ್ ನ್ನು ಹಾಕಿ ಎರಡೂ ಕಡೆ ಹೊಂಬಣ್ಣ ಬರುವವರಗೆ ಕರಿದು ತೆಗೆಯಿರಿ.