ಫ್ಯಾಷನ್ ಇಂದು ವಿಚಿತ್ರವಾಗಿ ವಿಕಸನಗೊಳ್ಳುತ್ತಿದೆ. ಕೆಲವರು ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನೂ ಬಿಟ್ಟು ಬೇಕಾದರೂ ಫ್ಯಾಷನ್ ಹೆಸರಿನಲ್ಲಿ ವಿಚಿತ್ರ ವೇಷ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ತುಂಡುಡುಗೆ ತೊಡುವುದು, ಮುಕ್ಕಾಲು ಪಾಲು ಅಂಗ ಪ್ರದರ್ಶನ ಮಾಡುವುದು ಈಗ ಇವೆಲ್ಲವೂ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಫ್ಯಾಷನ್ ಬೆಳೆದಿದೆ. ಅಂಥದ್ದೇ ಒಂದು ವಿಲಕ್ಷಣ ವಿಡಿಯೋ ಈಗ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಮೆಡೆಲೀನ್ ವೈಟ್ ಎಂಬ ರೂಪದರ್ಶಿ ತಾನು ತೊಟ್ಟ ಉಡುಗೆಗಳನ್ನು ಎಲ್ಲಾ ಕಡೆ ಹರಿದುಕೊಂಡು ತೋರಿಸುತ್ತಿದ್ದಾಳೆ. ಇದೇ ಅವಳ ಹೊಸ ಬಗೆಯ ಫ್ಯಾಷನ್ ಅಂತೆ ! ಹುಚ್ಚು ಹುಚ್ಚಾಗಿ ಎಲ್ಲೆಂದರೆಲ್ಲ ಕತ್ತರಿ ಪ್ರಯೋಗ ಮಾಡಿದ್ದಾಳೆ.
ವೀಡಿಯೊದಲ್ಲಿ, ಈಕೆ ತನ್ನ ಹೊಸ ಬೂದು ಬಣ್ಣದ ಜಂಪ್‌ಸೂಟ್ ಅನ್ನು ಪರಿಚಯಿಸುತ್ತಾಳೆ, ನಂತರ ಅದನ್ನು ಕತ್ತರಿಯಿಂದ ಹರಿಯಲು ಶುರು ಮಾಡುತ್ತಾಳೆ. ಮೊದಲಿಗೆ ಉದ್ದನೆಯ ತೋಳಿನ ಕ್ರಾಪ್ ಟಾಪ್ ರಚಿಸುತ್ತಾಳೆ. ನಂತರ ಅದು ಮಿನಿ ಸ್ಕರ್ಟ್ ಆಗುತ್ತದೆ. ಹೀಗೆ ತನ್ನದೇ ಆದ ರೀತಿಯಲ್ಲಿ ಬಟ್ಟೆಗಳನ್ನು ಬಣ್ಣಿಸುತ್ತಾ ಕತ್ತರಿಸಿಕೊಂಡರೆ ಕೆಲವರು ಈಕೆಯ ಸೌಂದರ್ಯವನ್ನು ಆಸ್ವಾದಿಸಿ ಕಮೆಂಟ್ ಹಾಕಿದ್ದರೆ, ಅನೇಕ ಮಂದಿ ಛೀಮಾರಿ ಹಾಕಿದ್ದಾರೆ.
https://youtu.be/vW4DZhTNvTM